ಮದುವೆ ಬಳಿಕ ಸಿನಿಮಾಗೆ ಅನುಷ್ಕಾ ಗುಡ್ ಬೈ..!

ತೆಲುಗು ಮತ್ತು ತಮಿಳು ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರು ತಮ್ಮ ವಿವಾಹದ ಬಳಿಕ ಚಿತ್ರರಂಗಕ್ಕೆ ವಿದಾಯ ಹೇಳಲಿದ್ದಾರೆ.
ನಟಿ ಅನುಷ್ಕಾ ಶೆಟ್ಟಿ
ನಟಿ ಅನುಷ್ಕಾ ಶೆಟ್ಟಿ
Updated on: 

ಹೈದರಾಬಾದ್: ತೆಲುಗು ಮತ್ತು ತಮಿಳು ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರು ತಮ್ಮ ವಿವಾಹದ ಬಳಿಕ ಚಿತ್ರರಂಗಕ್ಕೆ ವಿದಾಯ ಹೇಳಲಿದ್ದಾರೆ.

ಪ್ರಸ್ತುತ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸತತ ಹಿಟ್ ಚಿತ್ರಗಳನ್ನು ನೀಡುವ ಮೂಲಕ ಟಾಪ್ ಹಿರೋಯಿನ್ ಸಾಲಿನಲ್ಲಿರುವ ಬೆಂಗಳೂರು ಮೂಲದ ನಟಿ ಅನುಷ್ಕಾ ಅವರು ಚಿತ್ರರಂಗಕ್ಕೆ ವಿದಾಯ ಹೇಳುವ ಆಲೋಚನೆಯಲ್ಲಿದ್ದಾರಂತೆ. ಈ ವಿಚಾರವನ್ನು ಸ್ವತಃ ಅನುಷ್ಕಾ ಶೆಟ್ಟಿ ಅವರೇ ಹೇಳಿಕೊಂಡಿದ್ದು, ಸತತ ಚಿತ್ರೀಕರಣದಿಂದ ತಾವು ಸಾಕಷ್ಟು ದಣಿದಿದ್ದು ತಮಗೆ ವಿಶ್ರಾಂತಿ ಬೇಕು. ಚಿತ್ರೀಕರಣದಿಂದಾಗಿ ನನ್ನ ಕುಟುಂಬದೊಂದಿಗೂ ಕೂಡ ಸಮಯ ಕಳೆಯಲಾಗುತ್ತಿಲ್ಲ ಎಂದು ಅನುಷ್ಕಾ ಅವರು ತಮ್ಮ ಸ್ನೇಹಿತರೊಂದಿಗೆ ಅಳಲು ತೋಡಿಕೊಂಡಿದ್ದಾರಂತೆ.

ಚಿತ್ರೀಕರಣದಿಂದ ತಮ್ಮ ವೈಯುಕ್ತಿಕ ಆನಂದದಿಂದ ತಾವು ವಿಮುಖರಾಗುತ್ತಿದ್ದು, ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲು ಕೂಡ ಆಗುತ್ತಿಲ್ಲ. ಹೀಗಾಗಿ ಮದುವೆ ಬಳಿಕ ನಾನು ಚಿತ್ರರಂಗದಿಂದ ದೂರವುಳಿಯುತ್ತೇನೆ ಎಂದು ನಟಿ ಅನುಷ್ಕಾ ಶೆಟ್ಟಿ ಹೇಳಿಕೊಂಡಿದ್ದಾರೆ ಎಂದು ಅವರ ಆಪ್ತ ವಲಯದ ಮಂದಿ ಹೇಳಿದ್ದಾರೆ. ಇನ್ನು ತಮ್ಮ ಮದುವೆ ಕುರಿತಂತೆ ಗುಟ್ಟು ಬಿಟ್ಟುಕೊಡದ ಅನುಷ್ಕಾ, ತಾವು ಹಿರಿಯರು ನಿಶ್ಚಯಿಸಿದ ಮದುವೆ ಅಥವಾ ಪ್ರೀತಿಸಿ ಮದುವೆಯಾಗುತ್ತೇನೆಯೇ ಎಂಬುದು ಸಮಯ ಬಂದಾಗ ಎಲ್ಲರಿಗೂ ತಿಳಿಯುತ್ತದೆ. ಪ್ರಸ್ತುತ ನನ್ನ ಮದುವೆ ಎಂಬುದು ಇನ್ನೂ ದೂರದ ವಿಚಾರವಾಗಿದೆ ಎಂದು ಹೇಳುವ ಮೂಲಕ ಜಾರಿಕೊಂಡಿದ್ದಾರೆ.

ಇನ್ನು ನಟಿ ಅನುಷ್ಕಾ ಶೆಟ್ಟಿ ಅವರ ಹೆಸರು ಅಮೆರಿಕ ಮೂಲದ ಉಧ್ಯಮಿಯೋರ್ವರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದ್ದು, 2016ರಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಊಹಾಪೋಹಗಳು ಟಾಲಿವುಡ್ ನಲ್ಲಿ ಹರಿದಾಡುತ್ತಿದೆ. ಈ ಹಿಂದೆ ಇದೇ ನಟಿಯ ಹೆಸರು ತೆಲುಗು ಚಿತ್ರರಂಗದ ಖ್ಯಾತ ನಟ ನಾಗಾರ್ಜುನ ಅವರ ಮಗನ ಹೆಸರಿನೊಂದಿಗೆ ತಳುಕು ಹಾಕಿಕೊಂಡಿತ್ತು. ಪ್ರಸ್ತುತ ವಿವಿಧ ಚಿತ್ರಗಳಲ್ಲಿ ಬಿಸಿಯಾಗಿರುವ ಅನುಷ್ಕಾ ಶೆಟ್ಟಿ ತೆಲುಗಿನಲ್ಲಿ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಮತ್ತು ಗುಣಶೇಖರ್ ನಿರ್ದೇಶನದ ರುದ್ರಮದೇವಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ ತಮಿಳಿನಲ್ಲಿಯೂ ನಟ ವಿಜಯ್ ಮತ್ತು ಸೂರ್ಯ ಅಭಿನಯದ ಕೆಲ ಪ್ರಮುಖ ಚಿತ್ರಗಳಿಗೆ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com