'ಸ್ಟೈಲ್ ಕಿಂಗ್' ಗೆ ಸ್ಟೈಲಿಶ್ ಆಗಿದ್ದಾರಂತೆ ಅರ್ಜುನ್ ಜನ್ಯ

ಸಿನೆಮಾ ಪ್ರಚಾರವನ್ನು ವಿಶಿಷ್ಟವಾಗಿ ಮಾಡುವ ನಿರ್ದೇಶಕ ಪಿ ಸಿ ಶೇಖರ್, ತಮ್ಮ ಹಿಂದಿನ ಸಿನೆಮಾ 'ರೋಮಿಯೋ'ದಂತೆಯೇ ಈಗ ಬರಲಿರುವ 'ಸ್ಟೈಲ್ ಕಿಂಗ್' ಸಿನೆಮಾದ ಆಡಿಯೋ ಪ್ರಚಾರವನ್ನು
'ಸ್ಟೈಲ್ ಕಿಂಗ್' ನಲ್ಲಿ ಗಣೇಶ್
'ಸ್ಟೈಲ್ ಕಿಂಗ್' ನಲ್ಲಿ ಗಣೇಶ್
Updated on

ಬೆಂಗಳೂರು: ಸಿನೆಮಾ ಪ್ರಚಾರವನ್ನು ವಿಶಿಷ್ಟವಾಗಿ ಮಾಡುವ ನಿರ್ದೇಶಕ ಪಿ ಸಿ ಶೇಖರ್, ತಮ್ಮ ಹಿಂದಿನ ಸಿನೆಮಾ 'ರೋಮಿಯೋ'ದಂತೆಯೇ ಈಗ ಬರಲಿರುವ 'ಸ್ಟೈಲ್ ಕಿಂಗ್' ಸಿನೆಮಾದ ಆಡಿಯೋ ಪ್ರಚಾರವನ್ನು ಕೂಡ ಭರದಿಂದ ಮುಂದುವರೆಸಿದ್ದಾರೆ. 'ಬಹದ್ದೂರ್' ಸಿನೆಮಾದ ನಿರ್ದೇಶಕ ಚೇತನ್ ಕುಮಾರ್ ಬರೆದಿರುವ ವಿಶೇಷ ಹಾಡಿನಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಕಾಣಿಸಿಕೊಳ್ಳಲಿದ್ದು, ಇದು ಸಿನೆಮಾ ಅಲ್ಬಮ್ ನ ಪ್ರಮುಖ ಗೀತೆಯಂತೆ.

"ರೋಮಿಯೋದಲ್ಲಿ, ವಿಡಿಯೋ ಹಾಡಾದ 'ಬೆಳಗೆದ್ದು ಕಾಫಿ ಕುಡಿ'ಯಲ್ಲಿ ಅರ್ಜುನ್ ಕಾಣಿಸಿಕೊಂಡಿದ್ದರು. ಅದು ಸೂಪರ್ ಹಿಟ್ ಆಗಿತ್ತು. ಈಗ 'ಸ್ಟೈಲ್ ಕಿಂಗ್' ನಲ್ಲೂ ಅದೇ ಯಶಸ್ಸನ್ನು ಮರುಕಳಿಸಲಿದ್ದೇವೆ. ಅರ್ಜುನ್ ಜೊತೆ ಪ್ರಮೋಗಳನ್ನು ಶೂಟ್ ಮಾಡಲಿದ್ದೇವೆ. ಈ ಹಾಡನ್ನು ಅರ್ಜುನ್ ಅವರೇ ಹಾಡಲಿದ್ದಾರೆ. ಮೊದಲು ಸಾಮಾಜಿಕ ಅಂತರ್ಜಾಲದಲ್ಲಿ ಈ ಹಾಡು ಬಿಡುಗಡೆಯಾಗಲಿದೆ" ಎನ್ನುವ ಶೇಖರ್ ಈ ಹಾಡಿನಲಿ ಗಣೇಶ್ ಕೂಡ ವಿವಿಧ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತಾರೆ.

"ಈ ಹಾಡು 'ಸ್ಟೈಲ್ ಕಿಂಗ್' ಮೇಕಿಂಗ್ ನನ್ನು ಒಳಗೊಂಡಿರುತ್ತದೆ" ಎನ್ನುವ ಅವರು ಸಿನೆಮಾದಲ್ಲಿ ದಕ್ಷಿಣ ಭಾರತದ ನಟಿ ರಮ್ಯ ನಂಬೀಸನ್ ಅವರು ನಟಿಸಿರುವುದನ್ನು ಕೂಡ ತಿಳಿಸುತ್ತಾರೆ. ಸಿನೆಮಾ ಡಿಸೆಂಬರ್ ೨೫ಕ್ಕೆ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com