ಡೈನಾಮಿಕ್ ಸ್ಟಾರ್ ದೇವರಾಜ್ ಕುಟುಂಬ ಹಾಗೂ ಚಂದ್ರನ್ ಬಾಲು ಅವರ ಕುಟುಂಬ ಇವರಿಬ್ಬರ ವಿವಾಹಕ್ಕೆ ಒಪ್ಪಿಗೆ ನೀಡಿ ಸಂಭ್ರಮದಿಂದ ವಿವಾಹ ನೆರವೇರಿಸುತ್ತಿದ್ದಾರೆ. ರಾಗಿಣಿ ಚಂದ್ರನ್ ಮಾಡೆಲ್ ಹಾಗೂ ಪ್ರತಿಭಾವಂತ ನೃತ್ಯಗಾರ್ತಿಯಾಗಿದ್ದಾರೆ. ಪ್ರಜ್ವಲ್ ದೇವರಾಜ್ ಸಹ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಇವರ ವಿವಾಹ ಮಹೋತ್ಸವಕ್ಕೆ ಕನ್ನಡ ಚಿತ್ರರಂಗದ ನಟ-ನಟಿಯರು, ಗಣ್ಯರು, ರಾಜಕಾರಣಿಗಳು ಸೇರಿದಂತೆ ತಮಿಳು, ತೆಲಗು ಚಿತ್ರರಂಗದ ನಟ-ನಟಿಯರೂ ಸಹ ಆಗಮಿಸಲಿದ್ದಾರೆ.