ಬಿಗ್‍ಬಾಸ್- 3ಗೆ ಕಿರುತೆರೆ ಚಂದನ್?

ಕನ್ನಡದಲ್ಲಿ ಬಿಗ್‍ಬಾಸ್ ಜ್ವರ ಶುರುವಾಗಿದೆ. ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿರುವ ಈ ರಿಯಾಲಿಟಿ ಶೋನ ಪ್ರೋಮೋದಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕನ್ನಡದಲ್ಲಿ ಬಿಗ್‍ಬಾಸ್ ಜ್ವರ ಶುರುವಾಗಿದೆ. ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿರುವ ಈ ರಿಯಾಲಿಟಿ ಶೋನ ಪ್ರೋಮೋದಲ್ಲಿ ಈಗಾಗಲೇ ನಟ ಸುದೀಪ್ ಪಾಲ್ಗೊಂಡು, ಅಧಿಕೃತ ಚಾಲನೆ ನೀಡಿದ್ದಾಗಿದೆ. ಆದರೆ,ಬಿಗ್‍ಬಾಸ್ ಮನೆಯ ಅತಿಥಿಗಳು ಯಾರೆಂಬುದು ರಹಸ್ಯವಾಗುಳಿದಿದೆ. ಒಂದು ಮೂಲದ ಪ್ರಕಾರ ಖ್ಯಾತ ಕಿರುತೆರೆ ನಟ ಚಂದನ್ ಆಯ್ಕೆಯಾಗಿದ್ದಾರಂತೆ.

ಮೊನ್ನೆಯಷ್ಟೇ ಇವರ `ಲವ್ ಯು ಆಲಿಯ' ಚಿತ್ರ ಬಿಡುಗಡೆಯಾಗಿದೆ. ಇದಾದ ನಂತರ ಈ ಆಫರ್ ಸಿಕ್ಕಿದೆ ಅನ್ನೋ ಸುದ್ದಿಯಿದೆ. ಇದರ ಬೆನ್ನಲ್ಲೇ ಕೇಳಿಬರುತ್ತಿರುವ ಹೆಸರುಗಳು; ಹುಚ್ಚ ವೆಂಕಟ್, ಮೈತ್ರಿಯಾ ಗೌಡ, ರಾಗಿಣಿ ದ್ವಿವೇದಿ, ಮಾಸ್ಟರ್ ಆನಂದ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com