'ಕೋಲಾರ'ದ ಮೂಲಕ ಕನ್ನಡಕ್ಕೆ ಬಂದ ಜನಪ್ರಿಯ ತಮಿಳು ಗಾಯಕ ಗಾನ ಬಾಲ

ಪರಭಾಷೆಯಿಂದ ಕನ್ನಡದ ಚಿತ್ರೋದ್ಯಮಕ್ಕೆ ಆಗಿರುವ ಇತ್ತೀಚಿನ ಸೇರ್ಪಡೆ ತಮಿಳು ಹಿನ್ನಲೆ ಗಾಯಕ ಬಾಲ ಮುರುಗನ್. ಬಾಲ ಮುರುಗನ್ ತಮಿಳುನಾಡಿನಾದ್ಯಂತ
ತಮಿಳು ಗಾಯಕ ಗಾನ ಬಾಲ
ತಮಿಳು ಗಾಯಕ ಗಾನ ಬಾಲ
Updated on

ಬೆಂಗಳೂರು: ಪರಭಾಷೆಯಿಂದ ಕನ್ನಡದ ಚಿತ್ರೋದ್ಯಮಕ್ಕೆ ಆಗಿರುವ ಇತ್ತೀಚಿನ ಸೇರ್ಪಡೆ ತಮಿಳು ಹಿನ್ನಲೆ ಗಾಯಕ ಬಾಲ ಮುರುಗನ್. ಬಾಲ ಮುರುಗನ್ ತಮಿಳುನಾಡಿನಾದ್ಯಂತ ಗಾನ ಬಾಲ ಎಂದೆ ಪ್ರಖ್ಯಾತ. ಆರ್ಯ ಮಹೇಶ್ ನಿರ್ದೇಶನದ ಯೋಗಿ ನಟನೆಯ 'ಕೋಲಾರ' ಸಿನೆಮಾದ ಹಾಡೊಂದನ್ನು ಹಾಡುವ ಮೂಲಕ ಹಾಗೂ ಹೆಜ್ಜೆ ಹಾಕುವ ಮೂಲಕ ತೆರೆಯ ಮೇಲು ಕಾಣಿಸಿಕೊಳ್ಳಲಿದ್ದಾರಂತೆ.

ಕೋಲಾರದ ಕೆಜಿಎಫ್, ತಮಿಳು ನಾಡು ಮತ್ತು ಆಂಧ್ರದಲ್ಲಿ ಕೊಲೆ, ಕಳ್ಳತನ, ರೇಪ್ ಇತ್ಯಾದಿ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಭೂಗತ ದೊರೆ ತಂಗಂ ನಿಜ ಜೀವನ ಆಧಾರಿತ ಕಥೆಯಂತೆ ಇದು.

ಈ ಭೂಗತ ರೌಡಿಯ ಸಹಚರನೊಬ್ಬ ಸತ್ತಾಗ ಶೋಕಾಚರಣೆಯ ದೃಶ್ಯದಲ್ಲಿ ಬಾಲ ಹಾಡಿದ ಹಾಡು ಮೂಡುತ್ತದಂತೆ. ವಿಷಯಕ್ಕೆ ತಕ್ಕಂತೆ ಹಾಡಿನಲ್ಲಿ ಕೆಲವು ತಮಿಳು ಪದಗಳು ಮಿಳಿತವಾಗಿದೆಯಂತೆ.

ಸೋಮವಾರ ಲಗ್ಗೆರೆಯಲ್ಲಿ ಗಾನ ಬಾಲ, ಮೈಕೆಲ್, ರಾಜೇಂದ್ರ, ತಮಿಳು ನಟಿ ಸಂಗೀತಾ ಮತ್ತು ಯೋಗಿಯವರೊಂದಿಗೆ ಹಾಡಿನ ಚಿತ್ರೀಕರಣ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com