'ರಾಣಾ'ನಾಗಿ ರಾಕಿಂಗ್ ಸ್ಟಾರ್ ಯಶ್; ಹರ್ಷ ನಿರ್ದೇಶನ

ಕನ್ನಡ ಚಿತ್ರರಂಗದ ಗೆಲುವಿನ ಕುದುರೆ ಎಂದೇ ಖ್ಯಾತರಾದ ನಟ ರಾಕಿಂಗ್ ಸ್ಟಾರ್ ಯಶ್ ಅವರ ಹೊಸ ಸಿನೆಮಾ ಘೋಷಣೆಯಾಗಿದೆ. ನೃತ್ಯನಿರ್ದೇಶಕರಾಗಿದ್ದು ಈಗ ನಿರ್ದೇಶಕರಾಗಿರುವ ಎ ಹರ್ಷ
ನಿರ್ದೇಶಕ ಎ ಹರ್ಷ - ನಟ ರಾಕಿಂಗ್ ಸ್ಟಾರ್ ಯಶ್
ನಿರ್ದೇಶಕ ಎ ಹರ್ಷ - ನಟ ರಾಕಿಂಗ್ ಸ್ಟಾರ್ ಯಶ್
Updated on: 
ಬೆಂಗಳೂರು: ಕನ್ನಡ ಚಿತ್ರರಂಗದ ಗೆಲುವಿನ ಕುದುರೆ ಎಂದೇ ಖ್ಯಾತರಾದ ನಟ ರಾಕಿಂಗ್ ಸ್ಟಾರ್ ಯಶ್ ಅವರ ಹೊಸ ಸಿನೆಮಾ ಘೋಷಣೆಯಾಗಿದೆ. ನೃತ್ಯನಿರ್ದೇಶಕರಾಗಿದ್ದು ಈಗ ನಿರ್ದೇಶಕರಾಗಿರುವ ಎ ಹರ್ಷ ಈ ನೂತನ ಚಿತ್ರದ ನಿರ್ದೇಶಕ. ಶರಣ್ ಅಭಿನಯದ 'ಜೈ ಮಾರುತಿ 800' ನಂತರ ತಣ್ಣಗಾಗಿದ್ದ ಹರ್ಷ ಈಗ ಹೊಸ ಚಿತ್ರವನ್ನು ಹರ್ಷೋದ್ಘಾರದಿಂದ ಘೋಷಿಸಿದ್ದಾರೆ. 
ಈ ಹೊಸ ಚಿತ್ರದ ಹೆಸರು 'ರಾಣಾ'. ಯಶ್ ಅವರ ಜನ್ಮ ದಿನವಾದ ಜನವರಿ 8 2017 ಕ್ಕೆ ಈ ಚಿತ್ರದ ಮುಹೂರ್ತ ನೆರವೇರಲಿದೆಯಂತೆ. ಸಿಂಹಾದ್ರಿ ಪ್ರೊಡಕ್ಷನ್ ನ ರಮೇಶ್ ಕಶ್ಯಪ್ ಈ ಸಿನೆಮಾವನ್ನು ನಿರ್ಮಿಸಲಿದ್ದಾರೆ.
ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ ಮತ್ತು ನೃತ್ಯ ನಿರ್ದೇಶನ ಕೂಡ ಹರ್ಷ ಅವರದ್ದೇ. ಆಕ್ಷನ್, ಸೆಂಟಿಮೆಂಟ್ ಹಾಡುಗಳು ಎಲ್ಲವನ್ನು ಒಳಗೊಳ್ಳಲಿರುವ ಈ ಸಿನೆಮಾದ ತಾರಾಗಣ ಘೋಷಣೆಯಾಗಬೇಕಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com