ಮಿ ಅಂಡ್ ಮಿಸ್ಸಸ್ ರಾಮಚಾರಿಯಿಂದ ಅಭಿಮಾನಿಗಳಿಗೆ ನಿಶ್ಚಿತಾರ್ಥ ಫೋಟೊ ಉಡುಗೊರೆ

ನಿನ್ನೆ ತಾನೇ ಗೋವಾದಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು ಬಂದಿರುವ ಸ್ಯಾಂಡಲ್ ವುಡ್ ತಾರಾ ಜೋಡಿ...
ಯಶ್-ರಾಧಿಕಾ
ಯಶ್-ರಾಧಿಕಾ
ಬೆಂಗಳೂರು: ನಿನ್ನೆ ತಾನೇ ನಿಶ್ಚಿತಾರ್ಥ ಗೋವಾದಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು ಬಂದಿರುವ ಸ್ಯಾಂಡಲ್ ವುಡ್ ತಾರಾ ಜೋಡಿ ಯಶ್-ರಾಧಿಕಾ ಪಂಡಿತ್ ಸಾಮಾಜಿಕ ತಾಣದಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ.
ನಟ ಯಶ್ ತಮ್ಮ ಫೇಸ್ ಬುಕ್ ಪುಟದಲ್ಲಿ ಎಂಗೇಜ್ ಮೆಂಟ್ ಫೋಟೋ ಅಪ್ ಲೋಡ್ ಮಾಡಿ, ಇನ್ಮುಂದೆ ನೀವು ಕೇಳ್ಬೋದು...ನಾವು ಹೇಳ್ಬೋದು… ಪ್ರೀತಿಸಿ ಹರಸಿ ಆಶೀರ್ವಾದ ಮಾಡಿ ಎಂದು ಸ್ಟೇಟಸ್ ಹಾಕಿದ್ದಾರೆ.
ಇನ್ನು ರಾಧಿಕಾ ಪಂಡಿತ್ ಇನ್‍ಸ್ಟಾಗ್ರಾಂನಲ್ಲಿ ಫೋಟೋ ಅಪ್‍ಲೋಡ್ ಮಾಡಿ, ನನ್ನ ಹೀರೋ, ಭಾವಿ ಪತಿಯನ್ನು ಪರಿಚಯಿಸುತ್ತಿದ್ದೇನೆ.. ಎಲ್ಲರೂ ಹರಸಿ, ಆಶೀರ್ವದಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಫೋಟೋದಲ್ಲಿ ಎಂಗೇಜ್ ಮೆಂಟ್ ಉಂಗುರವನ್ನು ತೋರಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com