ಕಪ್ಪುಹಣದ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡಿರುವ ನೋಟು ನಿಷೇಧ ಕ್ರಮವನ್ನು ದೇಶದ ಎಲ್ಲಾ ನಾಗರಿಕರು ಬೆಂಬಲಿಸಬೇಕು ಎಂದಿರುವ ಅಮೀರ್ ಖಾನ್, ನೋಟು ನಿಷೇಧದಿಂದ ಸಹಜವಾಗಿ ಸಾಮಾನ್ಯ ಜನರಿಗೆ ಸಮಸ್ಯೆಯಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. " ನನ್ನ ಬಳಿ ಕಪ್ಪುಹಣ ಇರದ ಹಿನ್ನೆಲೆಯಲ್ಲಿ ನೋಟು ನಿಷೇಧ ಕ್ರಮದಿಂದ ನನಗೆ ಯಾವುದೇ ಸಮಸ್ಯೆಯಾಗಿಲ್ಲ. ನಾನು ತೆರಿಗೆ ಪಾವತಿಸುತ್ತೇನೆ. ಆದ್ದರಿಂದ ಕೇಂದ್ರ ಸರ್ಕಾರದ ನಿರ್ಧಾರ ಕಪ್ಪುಹಣ ಹೊಂದಿದ್ದವರಿಗೆ ಮಾತ್ರ ಸಮಸ್ಯೆಯಾಗಿ ಪರಿಣಮಿಸಿದೆ. ನಾನು ಕಾರ್ಡ್ ಮೂಲಕ ವಹಿವಾಟು ನಡೆಸುತ್ತೇನೆ" ಎಂದು ಅಮೀರ್ ಖಾನ್ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ್ದಾರೆ.