ತಮ್ಮ ಮೊದಲ ಪಾಕಿಸ್ತಾನಿ ಸಿನೆಮಾ ಬಗ್ಗೆ ಉತ್ಸುಕರಾಗಿರುವ ಓಂಪುರಿ

ತಾವು ನಟಿಸಿರುವ ಮೊದಲ ಪಾಕಿಸ್ತಾನಿ ಸಿನೆಮಾ "ಆಕ್ಟರ್ ಇನ್ ಲಾ'ದಲ್ಲಿ ಕೆಲಸ ಮಾಡುವುದಕ್ಕೆ ಅತೀವ ಖುಷಿಯಾಯಿತು ಎಂದಿದ್ದಾರೆ ಖ್ಯಾತ ನಟ ಓಂಪುರಿ.
ನಟ ಓಂಪುರಿ
ನಟ ಓಂಪುರಿ

ಮುಂಬೈ: ತಾವು ನಟಿಸಿರುವ ಮೊದಲ ಪಾಕಿಸ್ತಾನಿ ಸಿನೆಮಾ "ಆಕ್ಟರ್ ಇನ್ ಲಾ'ದಲ್ಲಿ ಕೆಲಸ ಮಾಡುವುದಕ್ಕೆ ಅತೀವ ಖುಷಿಯಾಯಿತು ಎಂದಿದ್ದಾರೆ ಖ್ಯಾತ ನಟ ಓಂಪುರಿ.

"ಅದೊಂದು ಸಾಮಾನ್ಯವಲ್ಲದ ಸ್ಕ್ರಿಪ್ಟ್. ನನಗೆ ಸ್ಕ್ರಿಪ್ಟ್ ಇಷ್ಟವಾಗಿ ನಟಿಸಬೇಕೆನ್ನಿಸಿತು. ಇದು ನನ್ನ ಮೊದಲ ಪಾಕಿಸ್ತಾನಿ ಚಿತ್ರ. ಸಿನೆಮಾದಲ್ಲಿ ಕೆಲಸ ಮಾಡಲು ನಿಜಕ್ಕೂ ಖುಷಿಯಾಯಿತು. ಇತ್ತೀಚೆಗಷ್ಟೇ ನನ್ನ ಭಾಗದ ಚಿತ್ರೀಕರಣ ಮುಸಿಕೊಂಡೆ" ಎಂದು ಕರಾಚಿಯಿಂದ ಹಿಂದಿರುಗಿದ ಓಂಪುರಿ ತಿಳಿಸಿದ್ದಾರೆ.

ನಬೀಲ್ ಖುರೇಶಿ ನಿರ್ದೇಶನದ 'ಆಕ್ಟರ್ ಇನ್ ಲಾ' ಚಿತ್ರತಂಡವನ್ನು ಕೂಡ ಓಂಪುರಿ ಪ್ರಶಂಸಿಸಿದ್ದಾರೆ.

'ಚೋರ್ ಚೋರ್ ಚುಪ್ಜಾ' ಸಿನೆಮಾದಿಂದ ೧೯೭೫ ರಲ್ಲಿ ಸಿನೆಮಾರಂಗಕ್ಕೆ ಕಾಲಿಟ್ಟ ನಟ "ಪಾಕಿಸ್ತಾನಿ ಜನ ಯಾವುದೇ ದ್ವೇಷ ತೋರದೆ ದಯಾಮಯವಾಗಿ ವರ್ತಿಸಿದರು" ಎಂದು ಕೂಡ ತಿಳಿಸಿದ್ದಾರೆ.

ಪಠಾನ್ ಕೋಟ್ ದಾಳಿಯ ಬಗೆಗಿನ ಪ್ರಶ್ನೆಗೆ "ಪಠಾನ್ ಕೋಟ್ ನಲ್ಲಿ ನಡೆದಿದ್ದು ಅತಿ ನೋವಿನ ಸಂಗತಿ. ನನ್ನ ಪತ್ರಿಕಾ ಗೋಷ್ಠಿಯಲ್ಲೂ ಹೇಳಿದ್ದೆ, ಇದನ್ನು ಮಾಡಿದವರಿಗೆ ನಾನು ಹೇಳುವುದೇನೆಂದರೆ ಇದು ಅರ್ಥವಿಲ್ಲದ ಕೆಲಸ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com