ವಿಶ್ವ ವಿಖ್ಯಾತ ಸಿನೆಮಾ ನಿರ್ದೇಶಕ ಅಬ್ಬಾಸ್ ಕ್ಯೋರೋಸ್ತಾಮಿ ವಿಧಿವಶ
ವಿಶ್ವವಿಖ್ಯಾತ ಇರಾನ್ ಸಿನೆಮಾ ನಿರ್ದೇಶಕ ಅಬ್ಬಾಸ್ ಕ್ಯೋರೋಸ್ತಾಮಿ ತಮ್ಮ 76 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ 'ಟೇಸ್ಟ್ ಆಫ್ ಚೆರ್ರಿ' ಸಿನೆಮಾ 1997 ರ ಕಾನ್ ಚಲನಚಿತ್ರೋತ್ಸವದಲ್ಲಿ
ವಿಶ್ವವಿಖ್ಯಾತ ಇರಾನ್ ಸಿನೆಮಾ ನಿರ್ದೇಶಕ ಅಬ್ಬಾಸ್ ಕ್ಯೋರೋಸ್ತಾಮಿ
ಪ್ಯಾರಿಸ್: ವಿಶ್ವವಿಖ್ಯಾತ ಇರಾನ್ ಸಿನೆಮಾ ನಿರ್ದೇಶಕ ಅಬ್ಬಾಸ್ ಕ್ಯೋರೋಸ್ತಾಮಿ ತಮ್ಮ 76 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ 'ಟೇಸ್ಟ್ ಆಫ್ ಚೆರ್ರಿ' ಸಿನೆಮಾ 1997 ರ ಕಾನ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದಿತ್ತು.
ಕ್ಯಾನ್ಸರ್ ನಿಂದ ನರಳುತ್ತಿದ್ದ ಕ್ಯೋರೋಸ್ತಾಮಿ ಚಿಕಿತ್ಸೆಗಾಗಿ ಪ್ಯಾರಿಸ್ ನಲ್ಲಿದ್ದರು. ತಮ್ಮ ಸಿನೆಮಾಗಳ ಮೂಲಕ ದೃಶ್ಯ ಕಾವ್ಯವನ್ನೇ ಕಟ್ಟಿಕೊಡುತ್ತಿದ್ದ ಅಬ್ಬಾಸ್ ಕ್ಯೋರೋಸ್ತಾಮಿ 20 ನೇ ಶತಮಾನದ ಪ್ರಮುಖ ನಿರ್ದೇಶಕರಲ್ಲಿ ಒಬ್ಬರು ಎಂದೇ ಪರಿಗಣಿಸಲಾಗಿತ್ತು.
ತೆಹೆರಾನ್ ನಲ್ಲಿ ಜನಿಸಿದ್ದ ಕ್ಯೋರೋಸ್ತಾಮಿ, ಇರಾನ್ ನ ಕನುನ್ ನಲ್ಲಿ 'ಮಕ್ಕಳು ಮತ್ತು ಯುವಕರಿಗಾಗಿ ಬೌದ್ಧಿಕ ಬೆಳವಣಿಗೆ ಸಂಸ್ಥೆಯನ್ನು' ಸ್ಥಾಪಿಸಿ ಮುನ್ನಡೆಸಿದ್ದರು. ಆ ಸಮಯದಲ್ಲೇ ಅವರು 'ಬ್ರೆಡ್ ಅಂಡ್ ಅಲ್ಲೇ' ಎಂಬ ಸಣ್ಣ ಸಿನೆಮಾ ನಿರ್ದೇಶಿಸಿದ್ದು.
'ವೇರ್ ಇಸ್ ದ ಫ್ರೆನ್ಡ್ಸ್ ಹೋಮ್?' 'ಲೈಫ್ ಅಂಡ್ ನಥಿಂಗ್ ಮೋರ್', 'ತ್ರೂ ದ ಆಲಿವ್ ಟ್ರೀಸ್', 'ದ ವೈಟ್ ಬಲೂನ್', 'ದ ವಿಂಡ್ ವಿಲ್ ಕ್ಯಾರಿ ಅಸ್', 'ಸರ್ಟಿಫೈಡ್ ಕಾಪಿ' ಇವರ ಪ್ರಖ್ಯಾತ ಸಿನೆಮಾಗಳಲ್ಲಿ ಕೆಲವು.