ರಂಗಿತರಂಗ ಹಿಟ್ ಎಫೆಕ್ಟ್: ಬಿಗ್ ಬ್ಯಾನರ್‌ನಲ್ಲಿ ಅವಂತಿಕ ಶೆಟ್ಟಿ 3ನೇ ಚಿತ್ರ

ಸೂಪರ್ ಹಿಟ್ ರಂಗಿತರಂಗ ಚಿತ್ರದ ಮೂಲಕ ಗಾಂಧಿನಗರದ ಗಮನ ಸೆಳೆದಿದ್ದ ಅವಂತಿಕ ಶೆಟ್ಟಿ ಇದೀಗ ಬೇಡಿಕೆಯ ನಟಿಯಾಗಿದ್ದಾರೆ.
ಅವಂತಿಕ ಶೆಟ್ಟಿ
ಅವಂತಿಕ ಶೆಟ್ಟಿ
Updated on

ಸೂಪರ್ ಹಿಟ್ ರಂಗಿತರಂಗ ಚಿತ್ರದ ಮೂಲಕ ಗಾಂಧಿನಗರದ ಗಮನ ಸೆಳೆದಿದ್ದ ಅವಂತಿಕ ಶೆಟ್ಟಿ ಇದೀಗ ಬೇಡಿಕೆಯ ನಟಿಯಾಗಿದ್ದಾರೆ.

ಹೌದು ಅವಂತಿಕ ಸದ್ಯ ಉಪೇಂದ್ರ ಅಭಿನಯದ ಕಲ್ಪನ-2 ಚಿತ್ರದಲ್ಲಿ ನಟಿಸುತ್ತಿದ್ದು, ಶಿವಲಿಂಗ ನಿರ್ಮಾಪಕ ಕೆಎ ಸುರೇಶ್ ಫಸ್ಟ್ ರ್ಯಾಂಕ್ ರಾಜು ಚಿತ್ರತಂಡದೊಂದಿಗೆ ಸಿನಿಮಾ ನಿರ್ಮಾಣಕ್ಕೆ ಕೈಹಾಕಿದ್ದಾರೆ.

ಫಸ್ಟ್ ರ್ಯಾಂಕ್ ರಾಜು ಚಿತ್ರ ನಿರ್ದೇಶಿಸಿದ್ದ ನರೇಶ್ ಅವರೇ ಹೊಸ ಚಿತ್ರವನ್ನು ನಿರ್ದೇಶಿಸಲಿದ್ದು, ಫಸ್ಟ್ ರ್ಯಾಂಕ್ ರಾಜು ಚಿತ್ರದ ನಾಯಕ ಗುರುನಂದನ್ ಈ ಚಿತ್ರಕ್ಕೂ ನಾಯಕನಾಗಿ ಆಯ್ಕೆಯಾಗಿದ್ದು, ಗುರುನಂದನ್ ಗೆ ನಾಯಕಿಯಾಗಿ ಅವಂತಿಕ ಶೆಟ್ಟಿ ಆಯ್ಕೆಯಾಗಿದ್ದಾರೆ.

ಇನ್ನು ಶೀರ್ಷಿಕೆ ಇಡದ ಹೊಸ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಪ್ರಾರಂಭವಾಗಿದ್ದು, ಅವಂತಿಕ ಶೆಟ್ಟಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಹೊಸ ಚಿತ್ರತಂಡದಲ್ಲಿ ಅಭಿನಯಿಸುತ್ತಿರುವುದು ಸಂತಸ ತಂದಿದೆ ಎಂದು ಅವಂತಿಕ ಶೆಟ್ಟಿ ಹೇಳಿದ್ದಾರೆ.

ತಮಿಳಿನ ಕಾಂಚನ-2 ಚಿತ್ರದಲ್ಲಿ ತಾಪ್ಸಿ ಪನ್ನು ನಟಿಸಿರುವ ಪಾತ್ರದಲ್ಲಿ ಅವಂತಿಕ ಶೆಟ್ಟಿ ನಟಿಸುತ್ತಿದ್ದು, ಕಲ್ಪನ-2 ಚಿತ್ರ ಮುಂದಿನ ವಾರ ತೆರೆ ಕಾಣಲಿದೆ. ನನ್ನ ಎರಡನೇ ಚಿತ್ರ ತೆರೆಕಾಣುವುದಕ್ಕೆ ಮುಂಚೆ ನಾನು ಮೂರನೇ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿಯ ವಿಚಾರ. ಇಂತ ಅವಕಾಶ ಎಲ್ಲಾ ನಟಿಯರಿಗೆ ಸಿಗುವುದಿಲ್ಲ ಎಂದು ಅವಂತಿಕ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com