ರಂಗಿತರಂಗ ಖ್ಯಾತಿಯ ಭಂಡಾರಿ ಬ್ರದರ್ಸ್ ಮುಂದಿನ ಚಿತ್ರ ರಾಜರಥ

ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ರಂಗಿತರಂಗ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಅವರ ಮುಂದಿನ ಚಿತ್ರಕ್ಕೆ ರಾಜರಥ ಎಂದು ಹೆಸರಿಡಲಾಗಿದೆ...
ರಾಜರಥ
ರಾಜರಥ
Updated on

ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ರಂಗಿತರಂಗ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಅವರ ಮುಂದಿನ ಚಿತ್ರಕ್ಕೆ ರಾಜರಥ ಎಂದು ಹೆಸರಿಡಲಾಗಿದೆ.

ಈ ಚಿತ್ರದಲ್ಲಿ ರಂಗಿತರಂಗ ಚಿತ್ರದಲ್ಲಿ ಅಭಿನಯಿಸಿದ್ದ ನಿರೂಪ್ ಭಂಡಾರಿ ಹಾಗೂ ಆವಂತಿಕಾ ಇಲ್ಲಿಯೂ ಒಟ್ಟಿಗೆ ನಟಿಸಲಿದ್ದು, ರಂಗಿತರಂಗ ಚಿತ್ರದ ಅಭಿನಯಕ್ಕಾಗಿ ಹಲವು ಪ್ರಶಸ್ತಿ ಪಡೆದಿದ್ದ ಸಾಯಿಕುಮಾರ್ ಸಹೋದರ ರವಿಶಂಕರ್ ಈ ಚಿತ್ರದಲ್ಲಿ ನಟಿಸಲಿದ್ದಾರೆ.

ಮೊದಲ ಬಾರಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಮಾಡಿದ್ದ ಅನೂಪ್ ಭಂಡಾರಿ ಈ ಬಾರಿ ರೋಮ್ಯಾಂಟಿಕ್ ಕಾಮಿಡಿ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅನೂಪ್ ಬಂಡಾರಿ ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಜತೆಗೆ ಸಂಗೀತ ನಿರ್ದೇಶನವನ್ನೂ ಮಾಡಲಿದ್ದಾರೆ.

ಟೈಟಲ್ ಅನಾವರಣ ಮಾಡಿದ ಪ್ರೇಮಲೋಕದ ಜೋಡಿ ರವಿಚಂದ್ರನ್-ಜೂಹಿ ಚಾವ್ಲಾ
ಪ್ರೇಮಲೋಕ ಚಿತ್ರದ ಜೋಡಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರು ರಿಯಾಲಿಟಿ ಶೋ ಡ್ಯಾನ್ಸಿಂಗ್ ಸ್ಟಾರ್ಸ್ 3 ಕಾರ್ಯಕ್ರಮದ ವೇಳೆ ಟ್ರೈಟಲ್ ಅನಾವರಣ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com