ರಿಲೀಸ್ ಗೂ ಮುನ್ನ ಕಬಾಲಿ ಲೀಕ್: ಹೈಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ

ತ್ರ ಬಿಡುಗಡೆ ಮುನ್ನವೇ ಆನ್​ಲೈನ್​ನಲ್ಲಿ ಲೀಕ್ ಆಗಿರುವುದು ಚಿತ್ರತಂಡದಲ್ಲಿ ಆತಂಕ ಮೂಡಿಸಿದೆ. ಈ ಸಂಬಂಧ ನಿರ್ಮಾಪಕರು ಮದ್ರಾಸ್ ಹೈಕೋರ್ಟ್ ಮೇಟ್ಟಿಲೇರಿದ್ದಾರೆ...
ರಜನಿ ಕಾಂತ್
ರಜನಿ ಕಾಂತ್
Updated on

ಚೆನ್ನೈ: ಹಲವು ದಿನಗಳಿಂದ ಬಿಡುಗಡೆ ದಿನಾಂಕ ಮುಂದೂಡುತ್ತಾ ಬಂದಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಕಬಾಲಿ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಚಿತ್ರ ಬಿಡುಗಡೆ ಮುನ್ನವೇ ಆನ್​ಲೈನ್​ನಲ್ಲಿ ಲೀಕ್ ಆಗಿರುವುದು ಚಿತ್ರತಂಡದಲ್ಲಿ ಆತಂಕ ಮೂಡಿಸಿದೆ. ಈ ಸಂಬಂಧ ನಿರ್ಮಾಪಕರು ಮದ್ರಾಸ್ ಹೈಕೋರ್ಟ್ ಮೇಟ್ಟಿಲೇರಿದ್ದಾರೆ.

ಜುಲೈ 22ರಂದು ಏಕಕಾಲದಲ್ಲಿ ದೇಶವಿದೇಶಗಳಲ್ಲಿ ತೆರೆಕಾಣಲಿರುವ ಕಬಾಲಿ ಚಿತ್ರ ಆನ್​ಲೈನ್​ನಲ್ಲಿ ಲೀಕಾಗಿದೆ ಎಂಬ ಸುದ್ದಿತಿಳಿದ ನಿರ್ಮಾಪಕ ಎಸ್. ಥನು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಕಾನೂನು ಬಾಹಿರವಾಗಿ ಚಿತ್ರವನ್ನು ಡೌನ್​ಲೋಡ್ ಮಾಡಲಾಗುತ್ತಿದೆ. ಇಂತಹ ಕೃತ್ಯವೆಸಗುವಲ್ಲಿ 180 ವೆಬ್ ತಾಣಗಳು ಮುಂಚೂಣಿಯಲ್ಲಿರುವುದು ಗಮನಕ್ಕೆ ಬಂದಿದ್ದು, ಈ ಕೂಡಲೇ ಆ ಎಲ್ಲಾ ವೆಬ್ ತಾಣಗಳನ್ನು ಸ್ಥಗಿತಗೊಳಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com