ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಮುಂದಿನ ಚಿತ್ರಕ್ಕೆ ಮನೋರಂಜನ್ ನಾಯಕ

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಮುಂದಿನ ಚಿತ್ರದಲ್ಲಿ ನಟಿಸಲಿದ್ದಾರೆ...
ಮನೋರಂಜನ್
ಮನೋರಂಜನ್
Updated on: 

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ  ಮುಂದಿನ ಚಿತ್ರದಲ್ಲಿ ನಟಿಸಲಿದ್ದಾರೆ.

ಸದ್ಯ ಮನೋರಂಜನ್ ಸಾಹೇಬ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ತಮ್ಮ ಎರಡನೇ ಚಿತ್ರ ರಾಕ್ ಲೈನ್ ವೆಂಕಟೇಶ್ ಜೊತೆ ಮಾಡಲಿದ್ದಾರೆ.

ತಮಿಳಿನಲ್ಲಿ  ಧನುಷ್ ನಟಿಸಿದ್ದ, ವೆಲಾಯಿಲ್ಲಾ ಪತ್ತತ್ತರಿ ಸಿನಿಮಾವನ್ನು ಕನ್ನಡಕ್ಕೆ ರಿಮೇಕ್ ಮಾಡಲಾಗುತ್ತಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಈ ರಿಮೇಕ್ ಚಿತ್ರಕ್ಕೆ ಮನೋರಂಜನ್ ಶೀಘ್ರವೇ ಸಹಿ ಹಾಕಲಿದ್ದಾರೆ.

ತಮಿಳಿನಲ್ಲಿ ಧನುಷ್ ಅಭಿನಯದ 25 ನೇ ಚಿತ್ರ ಇದಾಗಿದ್ದು, 2014 ರಲ್ಲಿ ಬಿಡುಗಡೆಯಾಗಿತ್ತು. ಇದೊಂದು ಮನರಂಜನಾ ಚಿತ್ರವಾಗಿದೆ. ಹೀಗಾಗಿ ಕನ್ನಡ ಪ್ರೇಕ್ಷಕರು ಈ ಸಿನಿಮಾವನ್ನು ಮೆಚ್ಚುತ್ತಾರೆ ಎಂದು ರಾಕ್ ಲೈನ್ ಹೇಳಿದ್ದಾರೆ.

ತಮಿಳಿನಲ್ಲಿ ಧನುಷ್ ನಟಿಸಿದ ಪಾತ್ರದಲ್ಲಿ ಕನ್ನಡದಲ್ಲಿ ಸಿನಿಮಾದಲ್ಲಿ ಮನೋರಂಜನ್ ಅಭಿನಯಿಸಲಿದ್ದಾರೆ. ಈ ಸಂಬಂಧ ಮನೋರಂದನ್ ಜೊತೆ ಮಾತುಕತೆ ನಡೆಸಲಾಗಿದೆ. ತಮ್ಮ ತಂದೆ ರವಿಚಂದ್ರನ್ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಮನೋರಂನ್ ತಿಳಿಸಿದ್ದಾರೆಂದು ರಾಕ್ ಲೈನ್ ವೆಂಕಟೇಶ್ ತಿಳಿಸಿದ್ದಾರೆ.

ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಂಡು ಎಂದರೇ ಗಂಡು ಭೂಪತಿ ಗಂಡು ಸಿನಿಮಾ ಶೂಟಿಂಗ್ ನಲ್ಲಿ ರಾಕ್ ಲೈನ್ ಬ್ಯುಸಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com