ಕಬಾಲಿ' ಪೋಸ್ಟರ್ 'ಮದಾರಿ'ಯಿಂದ ಕದ್ದದ್ದು: ನಟ ಇರ್ಫಾನ್ ಖಾನ್ ಆರೋಪ

ದಕ್ಷಿಣ ಭಾಗದ ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರುವ ಕಬಾಲಿ ಚಿತ್ರದ ಪೋಸ್ಟರ್ ಮದಾರಿ ಚಿತ್ರದಿಂದ ಕದ್ದದ್ದು ಎಂದು ನಟ ಇರ್ಫಾನ್ ಖಾನ್ ಅವರು ಆರೋಪ...
ಮದಾರಿ ಹಾಗೂ ಕಬಾಲಿ ಚಿತ್ರದ ಪೋಸ್ಟರ್ ಗಳು
ಮದಾರಿ ಹಾಗೂ ಕಬಾಲಿ ಚಿತ್ರದ ಪೋಸ್ಟರ್ ಗಳು
Updated on

ಮುಂಬೈ: ದಕ್ಷಿಣ ಭಾಗದ ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರುವ ಕಬಾಲಿ ಚಿತ್ರದ ಪೋಸ್ಟರ್ ಮದಾರಿ ಚಿತ್ರದಿಂದ ಕದ್ದದ್ದು ಎಂದು ನಟ ಇರ್ಫಾನ್ ಖಾನ್ ಅವರು ಆರೋಪ ವ್ಯಕ್ತಪಡಿಸಿದ್ದಾರೆ.

ಮುಂಬೈ ನ ಮಾಲ್ ವೊಂದರಲ್ಲಿ 'ಮದಾರಿ' ಚಿತ್ರ ಪ್ರಚಾರ ಸಂಬಂಧ ಭಾಗಿಯಾಗಿದ್ದ ಇರ್ಫಾನ್ ಅವರು, ಮದಾರಿ ಹಾಗೂ ಕಬಾರಿ ಚಿತ್ರ ಪೋಸ್ಟರ್ ಗಳು ಒಂದೇ ರೀತಿಯಲ್ಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಈ ಬಗ್ಗೆ ನನಗೂ ಸ್ಪಷ್ಟ ಮಾಹಿತಿ ಇಲ್ಲ. ನಾನು ಸಣ್ಣ ಚಿತ್ರ ತಯಾರಕರಾಗಿದ್ದೇವೆ. ರಜನಿಕಾಂತ್ ಸಿನಿಮಾ ಪೋಸ್ಟರ್ ನ್ನು ನಮ್ಮ ಚಿತ್ರದಿಂದ ಕದಿಯಲಾಗಿದೆ. ಇದರಲ್ಲಿ ಯಾವುದೇ ತೊಂದರೆ, ನಮ್ಮ ಚಿತ್ರ ಹಾಗೂ ಅವರ ಚಿತ್ರ ಎರಡನ್ನೂ ನೋಡಲಿ ಎಂದು ಹೇಳಿದ್ದಾರೆ.

ಮದಾರಿ ಚಿತ್ರದ ಪೋಸ್ಟರ್ ಹಾಗೂ ಕಬಾಲಿ ಚಿತ್ರದ ಪೋಸ್ಟರ್ ಗಳು ನೋಡಲು ಒಂದೇ ರೀತಿಯಲ್ಲಿದ್ದು, ನಟ ಇರ್ಫಾನ್ ಖಾನ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಅವರು ಒಂದೇ ರೀತಿಯ ಸ್ಲೈಡ್ ನಲ್ಲಿ ನಿಂತಿರುವುದು ಮತ್ತು ಹಿನ್ನೆಲೆ ಚಿತ್ರಣವೆಲ್ಲಾ ಒಂದೇ ರೀತಿಯಲ್ಲಿರುವುದು ಪೋಸ್ಟರ್ ನಲ್ಲಿ ಕಂಡುಬಂದಿದೆ.

ಈ ಆರೋಪಗಳ ಸಂಬಂಧ ಸ್ಪಷ್ಟನೆ ನೀಡಿರುವ ರಜನಿಕಾಂತ್ ಅವರ ಅಭಿಮಾನಿಗಳು, ಪೋಸ್ಟರ್ ನ್ನು ರಜನಿಕಾಂತ್ ಅವರ ಅಭಿಮಾನಿಗಳು ಮಾಡಿದ್ದು, ಇದು ಸಿನಿಮಾದ ಅಧಿಕೃತ ಪೋಸ್ಟರ್ ಅಲ್ಲ ಎಂದು ಹೇಳಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com