'ಸ್ಮೈಲ್ ಪ್ಲೀಸ್'ನಲ್ಲಿ ಕಾವ್ಯ ಶೆಟ್ಟಿ

ಪ್ರಾದೇಶಿಕ ನಟಿಯರಿಗೆ ಅವಕಾಶ ನೀಡಲು ಮುಂದಾಗಿರುವ ನಿರ್ಮಾಪಕ ಕೆ ಮಂಜು ತಮ್ಮ ಮುಂದಿನ ಚಿತ್ರ 'ಸ್ಮೈಲ್ ಪ್ಲೀಸ್'ಗೆ ನೇಹಾ ಪಾಟಿಲ್ ಜೊತೆಗೆ ಕಾವ್ಯ ಶೆಟ್ಟಿ ಅವರನ್ನು ಆಯ್ಕೆ ಮಾಡಿದ್ದಾರೆ.
ನಟಿ ಕಾವ್ಯ ಶೆಟ್ಟಿ
ನಟಿ ಕಾವ್ಯ ಶೆಟ್ಟಿ
Updated on: 

ಬೆಂಗಳೂರು: ಪ್ರಾದೇಶಿಕ ನಟಿಯರಿಗೆ ಅವಕಾಶ ನೀಡಲು ಮುಂದಾಗಿರುವ ನಿರ್ಮಾಪಕ ಕೆ ಮಂಜು ತಮ್ಮ ಮುಂದಿನ ಚಿತ್ರ 'ಸ್ಮೈಲ್ ಪ್ಲೀಸ್'ಗೆ ನೇಹಾ ಪಾಟಿಲ್ ಜೊತೆಗೆ ಕಾವ್ಯ ಶೆಟ್ಟಿ ಅವರನ್ನು ಆಯ್ಕೆ ಮಾಡಿದ್ದಾರೆ. ಸಂಬಾಷಣಕಾರ ರಘು ಸಮರ್ಥ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಈ ಇಬ್ಬರು ನಾಯಕಿರ ಎದುರು '1st ರ್ಯಾಂಕ್ ರಾಜು' ಖ್ಯಾತಿಯ ಗುರುನಂದನ್ ನಾಯಕನಟನಾಗಿ ನಟಿಸಲಿದ್ದಾರೆ. ಇನ್ನೂ ಒಬ್ಬ ನಾಯಕ ನಟಿಯ ಆಯ್ಕೆ ಮುಗಿಯಬೇಕಿದ್ದು, ಈ ತಿಂಗಳ ಕೊನೆಗೆ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.

ಇತ್ತೀಚೆಗಷ್ಟೇ ನಾಗತಿಹಳ್ಳಿ ಚಂದ್ರಶೇಖರ್ ಅವರ 'ಇಷ್ಟಕಾಮ್ಯ' ಸಿನೆಮಾದ ಚಿತ್ರೀಕರಣ ಮುಗಿಸಿರುವ ಕಾವ್ಯ ಶೆಟ್ಟಿ, 'ಸ್ಮೈಲ್ ಪ್ಲೀಸ್' ಚಿತ್ರತಂಡವನ್ನು ಸೇರಲಿದ್ದಾರೆ.

'1st ರ್ಯಾಂಕ್ ರಾಜು' ಸಿನೆಮಾದ ಮೂಲಕ ಖ್ಯಾತಿ ಪಡೆದಿರುವ ಗುರುನಂದನ್ ಅವರಿಗೆ ಅವಕಾಶಗಳ ಮಹಾಪೂರವೇ ಹರಿದುಬಂದಿದೆಯಂತೆ. 'ಸ್ಮೈಲ್ ಪ್ಲೀಸ್' ಚಿತ್ರ ಕೂಡ ಹಾಸ್ಯ ಚಿತ್ರವಾಗಿದ್ದು, ಅನಂತನಾಗ್ ಮತ್ತು ರಂಗಾಯಣ ರಘು ಕೂಡ ನಟಿಸಲಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com