3ನೇ ವಾರದ ಅಂತ್ಯದಲ್ಲೂ ಜಂಗಲ್ ಬುಕ್ ಬಾಕ್ಸ್ ಆಫೀಸ್ ಕಲೆಕ್ಷನ್ ಜೋರು

ಡಿಸ್ನಿಯ ‘ದಿ ಜಂಗಲ್ ಬುಕ್’ ಉತ್ತರ ಅಮೆರಿಕದ ಬಾಕ್ಸ್ ಆಫೀಸ್​ನಲ್ಲಿ ಭಾರಿ ಸದ್ದು ಮಾಡುತ್ತಿದೆ. ...
ಜಂಗಲ್ ಬುಕ್ ಚಿತ್ರ
ಜಂಗಲ್ ಬುಕ್ ಚಿತ್ರ

ಲಾಸ್​ಏಂಜಲಿಸ್: ಡಿಸ್ನಿಯ ‘ದಿ ಜಂಗಲ್ ಬುಕ್’ ಉತ್ತರ ಅಮೆರಿಕದ ಬಾಕ್ಸ್ ಆಫೀಸ್​ನಲ್ಲಿ ಭಾರಿ ಸದ್ದು ಮಾಡುತ್ತಿದೆ.

ಉತ್ತರ ಅಮೆರಿಕ ವೊಂದರಲ್ಲಿಯೇ ಮೂರನೇ ವಾರದ ಅಂತ್ಯದಲ್ಲಿ ನಿರೀಕ್ಷೆಯಂತೆ 42.2 ಮಿಲಿಯನ್ ಗೂ  ಜಾಸ್ತಿ ಆದಾಯ ತಂದು ದಾಖಲೆ ನಿರ್ಮಿಸುವತ್ತ ಹೆಜ್ಜೆ ಇಟ್ಟಿದೆ.

ವಿಶ್ವಾದ್ಯಂತ ಬರೋಬ್ಬರಿ 4500 ಕೋಟಿಗೂ ಜಾಸ್ತಿ ಆದಾಯ ತಂದುಕೊಟ್ಟಿದೆ. ಕಳೆದೊಂದು ವಾರಕ್ಕಿಂತ ಶೇಕಡಾ 31ರಷ್ಟು ಆದಾಯದಲ್ಲಿ ಹೆಚ್ಚಳ ಆಗಿದ್ದರೂ, ಆರೋಗ್ಯಕರ ಬೆಳವಣಿಗೆ ಎನ್ನಲಾಗುತ್ತಿದೆ. ಕಳೆದ 10 ದಿನಗಳಲ್ಲಿನ ಈ ಚಿತ್ರದ ಒಟ್ಟಾರೆ ಆದಾಯ 34 ಮಿಲಿಯನ್ ಡಾಲರ್ ( 225.67 ಕೋಟಿ ರೂ) ಎಂದು ಹೇಳಲಾಗಿದೆ.

ಉಳಿದಂತೆ ಈ ವಾರಾಂತ್ಯದಲ್ಲಿ ಬಾಕ್ಸ್ ಆಫೀಸ್​ನ ಹಿಟ್ ಚಿತ್ರ ಎನಿಸಿಕೊಂಡಿದ್ದು ‘ದಿ ಹಂಟ್ಸ್​ಮನ್: ವಿಂಟರ್ಸ್ ವಾರ್’. ಹೆಚ್ಚೂ ಕಡಿಮೆ 9.4 ಮಿಲಿಯನ್ ಡಾಲರ್ ಹಣ ಗಳಿಕೆಯೊಂದಿಗೆ ಎರಡನೇ ಸ್ಥಾನ ಗಳಿಸಿಕೊಂಡಿದೆ. 3ನೇ ಸ್ಥಾನದಲ್ಲಿ ಕೀನು ಚಿತ್ರವಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com