ಉತ್ತರ ಅಮೆರಿಕಾದಲ್ಲಿ ೧ ಮಿಲಿಯನ್ ಡಾಲರ್ ಕ್ಲಬ್ ಸೇರಿದ ಸೂರ್ಯ '೨೪'

ಸೂರ್ಯ ನಟಿಸಿರುವ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಿರುವ ಸೈ-ಫೈ (ಕಾಲ್ಪನಿಕ ವಿಜ್ಞಾನ) ಥ್ರಿಲ್ಲರ್ '೨೪' ಉತ್ತರ ಅಮೆರಿಕಾದಲ್ಲಿ ೧ಮಿಲಿಯನ್ ಡಾಲರ್ ಕ್ಲಬ್ ಸೇರಿದ ನಟನ ಮೊದಲ ಸಿನೆಮಾ ಆಗಿ
'೨೪' ಸಿನೆಮಾದಲ್ಲಿ ಸೂರ್ಯ
'೨೪' ಸಿನೆಮಾದಲ್ಲಿ ಸೂರ್ಯ
Updated on: 

ಚೆನ್ನೈ: ಸೂರ್ಯ ನಟಿಸಿರುವ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಿರುವ ಸೈ-ಫೈ (ಕಾಲ್ಪನಿಕ ವಿಜ್ಞಾನ) ಥ್ರಿಲ್ಲರ್ '೨೪' ಉತ್ತರ ಅಮೆರಿಕಾದಲ್ಲಿ ೧ಮಿಲಿಯನ್ ಡಾಲರ್ ಕ್ಲಬ್ ಸೇರಿದ ನಟನ ಮೊದಲ ಸಿನೆಮಾ ಆಗಿ ಹೊರಹೊಮ್ಮಿದೆ.

ಸಿನೆಮಾದ ಉತ್ತರ ಅಮೆರಿಕಾದ ವಿತರಕ 'ಸಿನೆಗ್ಯಾಲೆಕ್ಸಿ' ಪ್ರಕಾರ ಭಾನುವಾರದ ಅಂತ್ಯಕ್ಕೆ '೨೪' ೧ ಮಿಲಿಯನ್ ಡಾಲರ್ ಗಳಿಕೆ ಮೀರಿದೆ.

ವಿಕ್ರಮ್ ಕುಮಾರ್ ನಿರ್ದೇಶಿಸಿರುವ ಟೈಮ್ ಟ್ರಾವೆಲ್ ಥ್ರಿಲ್ಲರ್ ಸಿನೆಮಾದಲ್ಲಿ ಸಮಂತ ರುತ್ ಪ್ರಭು ಹಾಗು ನಿತ್ಯ ಮೆನನ್ ಕೂಡ ನಟಿಸಿದ್ದಾರೆ.

ಸೂರ್ಯ ತ್ರಿಪಾತ್ರಗಳಲ್ಲಿ ನಟಿಸಿದ್ದು, ಅವರ ಖಳನಾಯಕನ ನಟನೆಗೆ ವಿಮರ್ಶಕರು ಮತ್ತು ವೀಕ್ಷಕರು ಒಂದೇ ರೀತಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಿನೆಗ್ಯಾಲೆಕ್ಸಿ ವಿತರಕರಿಗೆ ವಿಜಯ್ ನಟನೆಯ 'ತೇರಿ' ನಂತರ ೧ ಮಿಲಿಯನ್ ಡಾಲರ್ ಗಳಿಕೆ ಮೀರಿರುವ ಎರಡನೆ ಸಿನೆಮಾ ಆಗಿದೆ '೨೪'.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com