'ತಿಥಿ' ಮೆಚ್ಚಿದ ಬಾಲಿವುಡ್ ನಟಿ ಕಲ್ಕಿ

ನಿರ್ದೇಶಕ ರಾಮ್ ರೆಡ್ಡಿ ನಿರ್ದೇಶನದ 'ತಿಥಿ' ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು, ಈಗ ಕರ್ನಾಟಕದಲ್ಲೂ ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನ
ಬಾಲಿವುಡ್ ನಟಿ ಕಲ್ಕಿ ಕೋಚ್ಲಿನ್
ಬಾಲಿವುಡ್ ನಟಿ ಕಲ್ಕಿ ಕೋಚ್ಲಿನ್
Updated on

ಬೆಂಗಳೂರು: ನಿರ್ದೇಶಕ ರಾಮ್ ರೆಡ್ಡಿ ನಿರ್ದೇಶನದ 'ತಿಥಿ' ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು, ಈಗ ಕರ್ನಾಟಕದಲ್ಲೂ ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವುದು ವಿಶೇಷ.

'ತಿಥಿ' ಸಿನೆಮಾ ಹಾಲಿವುಡ್ ನ ಖ್ಯಾತ ನಿರ್ದೇಶಕ 'ಗಾಡ್ ಫಾದರ್' ಖ್ಯಾತಿಯ ಫ್ರಾನ್ಸಿಸ್ ಕೊಪ್ಪೋಲಾ ಇಂದ ಹಿಡಿದು ಬಾಲಿವುಡ್ ನ ಖ್ಯಾತ ನಿರ್ದೇಶಕ 'ಗ್ಯಾಂಗ್ಸ್ ಆಫ್ ವಸೀಪುರ್' ಖ್ಯಾತಿಯ ಅನುರಾಗ್ ಕಶ್ಯಪ್ ನಂತಹ ಅಭಿಮಾನಿಗಳನ್ನು ಪಡೆದಿತ್ತು. ಈಗ ಈ ಪಟ್ಟಿಗೆ ಬಾಲಿವುಡ್ ನಟಿ ಕಲ್ಕಿ ಕೋಚ್ಲಿನ್ ಕೂಡ ಸೇರ್ಪಡೆಯಾಗಿದ್ದಾರೆ.

'ತಿಥಿ' ಸಿನೆಮಾ ನೋಡಿ ಅದನ್ನು ಪ್ರಶಂಸಿಸಲು ಟ್ವಿಟ್ಟರ್ ಮೊರೆ ಹೋಗಿರುವ ಕಲ್ಕಿ "'ತಿಥಿ' ನೋಡಿ. ಸರಳ ಆದರೆ ಹಾಸ್ಯಮಯ ಮತ್ತು ತಾತ್ವಿಕ ಸಿನೆಮಾ" ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com