ಸಿನಿಮಾ ಸುದ್ದಿ

ಹುಡುಗಿಯರ 'ದಿಲ್ ಚಾಹ್ತಾ ಹೈ' ಮಾಡುವಾಸೆ: ಫರ್ಹಾನ್ ಅಕ್ತರ್

ಈ ಹಿಂದೆ ನಿರ್ದೇಶಿಸಿದ್ದ 'ದಿಲ್ ಚಾಹ್ತಾ ಹೈ' ಸಿನೆಮಾದ ಎರಡನೇ ಭಾಗವನ್ನು ಹುಡುಗಿಯರ ದೃಷ್ಟಿಕೋನದಲ್ಲಿ ನಿರ್ದೇಶಿಸುವಾಸೆ ಎಂದಿದ್ದಾರೆ ನಟ-ನಿರ್ದೇಶಕ ಫರ್ಹಾನ್ ಅಕ್ತರ್.

ಹುಡುಗಿಯರ 'ದಿಲ್ ಚಾಹ್ತಾ ಹೈ' ಮಾಡುವಾಸೆ: ಫರ್ಹಾನ್ ಅಕ್ತರ್
ದಿಲ್ ಚಾಹ್ತಾ ಹೈ ಸಿನೆಮಾದ ಸ್ಟಿಲ್
Published On :
ಮುಂಬೈ: ಈ ಹಿಂದೆ ನಿರ್ದೇಶಿಸಿದ್ದ 'ದಿಲ್ ಚಾಹ್ತಾ ಹೈ' ಸಿನೆಮಾದ ಎರಡನೇ ಭಾಗವನ್ನು ಹುಡುಗಿಯರ ದೃಷ್ಟಿಕೋನದಲ್ಲಿ ನಿರ್ದೇಶಿಸುವಾಸೆ ಎಂದಿದ್ದಾರೆ ನಟ-ನಿರ್ದೇಶಕ ಫರ್ಹಾನ್ ಅಕ್ತರ್. 
ಆಮೀರ್ ಖಾನ್, ಸೈಫ್ ಅಲಿ ಖಾನ್ ಮತ್ತು ಅಕ್ಷಯ್ ಖನ್ನಾ ಮುಖ್ಯ ಭೂಮಿಕೆಯಲ್ಲಿದ್ದು ೨೦೦೧ ರಲ್ಲಿ ಬಿಡುಗಡೆಯಾಗಿದ್ದ 'ದಿಲ್ ಚಾಹ್ತಾ ಹೈ' ಯಶಸ್ವಿಯಾಗಿ ಪ್ರದರ್ಶನ ಕಂಡಿತ್ತು. 
"ನಾವು ಹುಡುಗಿಯರನ್ನು ಎಂದಿಗೂ ಉಪೇಕ್ಷಿಸಿಲ್ಲ. ನಮ್ಮ ಸಿನೆಮಾಗಳಲ್ಲಿ ಯಾವೊತ್ತು ದಿಟ್ಟ ಮಹಿಳಾ ಪಾತ್ರಗಳನ್ನೂ ಸೃಷ್ಟಿಸಿದ್ದೆವು.... ನಾನು ಹುಡುಗನಾಗಿರುವುದರಿಂದ, ಅವರ ದೃಷ್ಟಿಕೋನದಲ್ಲಿ ಚಿಂತೆ ಮಾಡುವುದು ಸುಲಭವಾಗಿತ್ತು. ಈಗ ಹುಡುಗಿಯರು ಮುಖ್ಯ ಭೂಮಿಕೆಯಲ್ಲಿರುವ 'ದಿಲ್ ಚಾಹ್ತಾ ಹೈ' ಎರಡನೇ ಭಾಗ ಮಾಡುವಾಸೆ ಇದೆ" ಎಂದು ಫರ್ಹಾನ್ ಹೇಳಿದ್ದಾರೆ.
ಇದು ನಟಿ ಆಲಿಯಾ ಭಟ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರಿಂದ ಹೊಳೆದ ಐಡಿಯಾ ಎನ್ನುವ ಅವರು "ಇದು ಒಳ್ಳೆಯ ಐಡಿಯಾ" ಎಂದಿದ್ದಾರೆ. 
ಸದ್ಯಕ್ಕೆ ಶುಕ್ರವಾರ ಬಿಡುಗಡೆಯಾಗಿರುವ ರಾಕ್ ಆನ್-೨ ಸಿನೆಮಾದ ಪ್ರಚಾರ ಕಾರ್ಯದಲ್ಲಿ ಫರ್ಹಾನ್ ಅಖರ್ ನಿರತರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.