ರಶ್ಮಿಕಾ ಮಂದಣ್ಣಾಗೆ ಒಲಿದ ಅದೃಷ್ಟ; ದೊಡ್ಡ ಬಜೆಟ್ ಚಿತ್ರದಲ್ಲಿ ಪಾತ್ರ

ಪ್ರಕಾಶ್ ನಿರ್ದೇಶನದಲ್ಲಿ ನಟ ದರ್ಶನ್ ಜೊತೆಗೆ ಶ್ರುತಿ ಹರಿಹರನ್ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದಿಗೆ ಮತ್ತೊಬ್ಬ ಕನ್ನಡ ಹುಡುಗಿ ರಶ್ಮಿಕಾ ಮಂದಣ್ಣ ಕೂಡ ಈ ಚಿತ್ರದಲ್ಲಿ ಪಾತ್ರ ಪಡೆದಿದ್ದಾರೆ.
ದರ್ಶನ್-ಶ್ರುತಿ ಹರಿಹರನ್-ರಶ್ಮಿಕ ಮಂದಣ್ಣ
ದರ್ಶನ್-ಶ್ರುತಿ ಹರಿಹರನ್-ರಶ್ಮಿಕ ಮಂದಣ್ಣ
Updated on
ಬೆಂಗಳೂರು: ಪ್ರಕಾಶ್ ನಿರ್ದೇಶನದಲ್ಲಿ ನಟ ದರ್ಶನ್ ಜೊತೆಗೆ ಶ್ರುತಿ ಹರಿಹರನ್ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದಿಗೆ ಮತ್ತೊಬ್ಬ ಕನ್ನಡ ಹುಡುಗಿ ರಶ್ಮಿಕಾ ಮಂದಣ್ಣ ಕೂಡ ಈ ಚಿತ್ರದಲ್ಲಿ ಪಾತ್ರ ಪಡೆದಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಗಮನ ಸೆಳೆದಿರುವ ರಶ್ಮಿಕಾ, ರಿಷಬ್ ಶೆಟ್ಟಿ ಅವರ ಇನ್ನು ಬಿಡುಗಡೆಯಾಗಬೇಕಿರುವ 'ಕಿರಿಕ್ ಪಾರ್ಟಿ' ಸಿನೆಮಾದಲ್ಲಿ ನಟಿಸುತ್ತಿರುವುದು ಕೂಡ ವಿಶೇಷ. 
ಇನ್ನು ಪದವಿ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ರಶ್ಮಿಕಾ ತಮ್ಮ ಮೊದಲ ಚಿತ್ರದ ಬಿಡುಗಡೆಗೆ ಮುಂಚಿತವಾಗಿಯೇ ನಿರ್ದೇಶಕ ಪ್ರಕಾಶ್ ಅವರ ಗಮನ ಸೆಳೆದಿರುವುದು ವಿಶೇಷ. ಈ ಬಗ್ಗೆ ಸಿನೆಮಾದ ನಿರ್ಮಾಕರು ಇನ್ನು ಯಾವುದೇ ವಿವರಗಳನ್ನು ನೀಡಿಲ್ಲ. 
ಎಲ್ಲವು ನಿಗದಿಯಾದಂತೆ ನಡೆದರೆ, ಇದೆ ಮೊದಲ ಬಾರಿಗೆ ಈ ಇಬ್ಬರು ನಟಿಯರು ದರ್ಶನ್ ಅವರೊಂದಿಗೆ ಮೊದಲ ಬಾರಿಗೆ ನಟಿಸಲಿದ್ದಾರೆ. ದೊಡ್ಡ ಸ್ಟಾರ್ ನಟನೊಂದಿಗೆ ನಟಿಸಲು ರಶ್ಮಿಕಾ ಅವ್ರರ ವೃತ್ತಿಜೀವನದ ಪ್ರಾರಂಭದಲೇ ಅವರಿಗೆ ಅವಕಾಶ ಸಿಕ್ಕಿರುವುದು ವಿಶೇಷ. 
'ಮಾದ ಮತ್ತು ಮಾನಸಿ' ಹಾಗು 'ಬ್ಯುಟಿಫುಲ್ ಮನಸುಗಳು' ಚಿತ್ರಗಳ ಬಿಡುಗಡೆಗೆ ಕಾಯುತ್ತಿರುವ ಶ್ರುತಿ ಹರಿಹರನ್ ಈಗಷ್ಟೇ ಉಪೇಂದ್ರ ಅಭಿನಯದ 'ಉಪೇಂದ್ರ ಮತ್ತೆ ಹುಟ್ಟಿ ಬಾ... ಇಂತಿ ಪ್ರೇಮ' ಸಿನೆಮಾದ ಚಿತ್ರೀಕರಣ ಮುಗಿಸಿದ್ದಾರೆ. ನಿರತಂತರವಾಗಿ ನಟಿಸುತ್ತಿರುವ ಶ್ರುತಿ ಕನ್ನಡದ ಬ್ಯುಸಿ ನಟಿಯರಲ್ಲಿ ಒಬ್ಬರು. 
ಡಿಸೆಂಬರ್ ೨ ರಂದು ಈ ಸಿನೆಮಾದ ಮುಹೂರ್ತ ನಿಗದಿಯಾಗಿದ್ದು, ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಕೃಷ್ಣ ಕುಮಾರ್ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com