ನಿರ್ದೇಶಕನಾದ ಧನುಷ್; 'ಪವರ್ ಪಾಂಡಿ' ಸಿನೆಮಾದ ಮೊದಲ ನೋಟ ಬಿಡುಗಡೆ
ರಾಷ್ಟ್ರೀಯ ಪ್ರಶಸ್ತಿ ವಿಜೇತ ತಮಿಳು ನಟ ಧನುಷ್ ಈಗಾಗಲೇ ಹಲವು ಸಿನೆಮಾಗಳನ್ನು ನಿರ್ಮಿಸಿ, ಗೀತ ರಚನೆ ಮಾಡಿ, ಗಾಯಕರಾಗಿ ಜನಪ್ರಿಯವಾಗಿದ್ದವರು ಈಗ ಚೊಚ್ಚಲ ನಿರ್ದೇಶನಕ್ಕೆ ಮುಂದಾಗಿದ್ದಾರೆ.
'ಪವರ್ ಪಾಂಡಿ' ಸಿನೆಮಾದ ಮೊದಲ ನೋಟ (ಕೃಪೆ: ಧನುಷ್ ಫೇಸ್ಬುಕ್ ಪುಟ)
ರಾಷ್ಟ್ರೀಯ ಪ್ರಶಸ್ತಿ ವಿಜೇತ ತಮಿಳು ನಟ ಧನುಷ್ ಈಗಾಗಲೇ ಹಲವು ಸಿನೆಮಾಗಳನ್ನು ನಿರ್ಮಿಸಿ, ಗೀತ ರಚನೆ ಮಾಡಿ, ಗಾಯಕರಾಗಿ ಜನಪ್ರಿಯವಾಗಿದ್ದವರು ಈಗ ಚೊಚ್ಚಲ ನಿರ್ದೇಶನಕ್ಕೆ ಮುಂದಾಗಿದ್ದಾರೆ.
ಈ ಸಿನೆಮಾದ ಶೀರ್ಷಿಕೆ 'ಪವರ್ ಪಾಂಡಿ' ಎಂದಿದ್ದು, ಖ್ಯಾತ ನಟ ರಾಜಕಿರಣ್ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ. ನಟ ಪ್ರಸನ್ನ ಮತ್ತು ಛಾಯಾ ಸಿಂಗ್ ಕೂಡ ಮುಖ್ಯಭೂಮಿಕೆಯಲ್ಲಿದ್ದಾರೆ. ಸಿನೆಮಾದ ಮೊದಲ ನೋಟ ಬಿಡುಗಡೆಯಾಗಿದ್ದು, ರಾಜಕಿರಣ್ ತಮ್ಮ ಗ್ಯಾಂಗ್ ನೊಂದಿಗೆ ಕಾಣಿಸಿಕೊಂಡಿದ್ದಾರೆ.
ಸಿಯಾನ್ ರೊಲ್ಡಾನ್ ಸಿನೆಮಾಗೆ ಸಂಗೀತ ನೀಡುತ್ತಿದ್ದು, ಆರ್ ವೆಲ್ರಾಜ್ ಅವರ ಸಿನೆಮ್ಯಾಟೋಗ್ರಾಫಿ ಇದೆ.