ದೊಡ್ಮನೆ ಹುಡುಗ ತೆಲುಗಿಗೆ ರಿಮೇಕ್?: ಪುನೀತ್ ಪಾತ್ರದಲ್ಲಿ ಅಲ್ಲು ಅರ್ಜುನ್

ಸೂರಿ ನಿರ್ದೇಶನದ ಬಹು ನಿರೀಕ್ಷಿತ ದೊಡ್ಮನೆ ಹುಡ್ಗ ಚಿತ್ರ ಸೆಪ್ಟಂಬರ್ ನಲ್ಲಿ ಬಿಡುಗಡೆಗೊಳ್ಳಲಿದೆ. ರಿಲೀಸ್ ಗೂ ಮುನ್ನ ಸಾಕಷ್ಟು ಸುದ್ದಿ ಮಾಡಿರುವ ಈ ಚಿತ್ರ...
ಅಲ್ಲು ಅರ್ಜುನ್ ಮತ್ತು ಚಿರಂಜೀವಿ
ಅಲ್ಲು ಅರ್ಜುನ್ ಮತ್ತು ಚಿರಂಜೀವಿ

ಬೆಂಗಳೂರು: ಸೂರಿ ನಿರ್ದೇಶನದ ಬಹು ನಿರೀಕ್ಷಿತ ದೊಡ್ಮನೆ ಹುಡ್ಗ ಚಿತ್ರ ಸೆಪ್ಟಂಬರ್ ನಲ್ಲಿ ಬಿಡುಗಡೆಗೊಳ್ಳಲಿದೆ. ರಿಲೀಸ್ ಗೂ ಮುನ್ನ ಸಾಕಷ್ಟು ಸುದ್ದಿ ಮಾಡಿರುವ ಈ ಚಿತ್ರ ತೆಲುಗಿನಲ್ಲಿ ರಿಮೇಕ್ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಚಿತ್ರದ ಬಿಡುಗಡೆಗಾಗಿ ಕಾಯುತ್ತಿರುವ ಕೆಲ ನಿರ್ಮಾಪಕರು ರಿಮೇಕ್ ರೈಟ್ಸ್ ಪಡೆದುಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಗಳು ದೊರೆತಿಲ್ಲ.

ದೊಡ್ಮನೆ ಹುಡುಗ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ವಹಿಸಿರುವ ಪಾತ್ರವನ್ನು ಅಲ್ಲು ಅರ್ಜುನ್ ಮಾಡಲಿದ್ದು, ಪುನೀತ್ ತಂದೆಯಾಗಿ ರೆಬೆಲ್ ಸ್ಟಾರ್ ಅಂಬರೀಷ್ ನಿರ್ವಹಿಸಿರುವ ಪಾತ್ರದಲ್ಲಿ ಮೆಗಾ ಸ್ಚಾರ್ ಚಿರಂಜೀವಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿದೆ.

ನಿರ್ದೇಶಕ ಸೂರಿಯ ಮೊದಲ ಕೌಟುಂಬಿಕ ಚಿತ್ರ ಇದಾಗಿದೆ. ಇನ್ನೂ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್, ಅಂಬರೀಷ್, ರಾಧಿಕಾ ಪಂಡಿತ್, ಸುಮಲತಾ, ಭಾರತಿ ವಿಷ್ಣು ವರ್ಧನ್ ತಾರಾಗಣದಲ್ಲಿದ್ದಾರೆ. ಯಾವುದೇ ಕತ್ತರಿ ಪ್ರಯೋಗವಿಲ್ಲದೇ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com