'ಮಸಾಲ್ ದೋಸೆ ಸೌಮ್ಯ' ಗೆ ಜಗ್ಗೇಶ್ ಮಾಲೀಕ

ನೀರ್ ದೋಸೆ ಸಿನಿಮಾದ 'ಮಸಾಲ್ ದೋಸೆ ಸೌಮ್ಯ' ಜನಪ್ರಿಯ ಡೈಲಾಗ್ ಅನ್ನು ಮುಂದಿನ ಸಿನಿಮಾದ ಟೈಟಲ್
ಜಗ್ಗೇಶ್
ಜಗ್ಗೇಶ್

ಬೆಂಗಳೂರು: ನೀರ್ ದೋಸೆ ಸಿನಿಮಾದ 'ಮಸಾಲ್ ದೋಸೆ ಸೌಮ್ಯ' ಜನಪ್ರಿಯ ಡೈಲಾಗ್ ಅನ್ನು ಮುಂದಿನ ಸಿನಿಮಾದ ಟೈಟಲ್ ಅಗಿ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಜಗ್ಗೇಶ್ ತಮ್ಮ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ.

ನೀರ್ ದೋಸೆ ಸಿನಿಮಾದ ಮಸಾಲ್ ದೋಸೆ ಸೌಮ್ಯ ಡೈಲಾಗ್ ಪ್ರೇಕ್ಷಕರಿಗೆ ಅಚ್ಚು ಮೆಚ್ಚಾಗಿದೆ. ಈ ಜನಪ್ರಿಯವಾಗಿರುವ ಡೈಲಾಗ್ ಅನ್ನು ಒಬ್ಬ ಸಿನಿಮಾ
ನಿರ್ಮಾಪಕ ತಮ್ಮ ಸಿನಿಮಾದ ಟೈಟಲ್ ಮಾಡಿಕೊಳ್ಳಲು ಯೋಜಿಸಿದ್ದು ನನ್ನ ಗಮನಕ್ಕೆ ಬಂತು. ಬೇರೆ ಯಾರೂ ಈ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ, ಹೀಗಾಗಿ ನಾನೇ ಕೂಡಲೇ ಹೋಗಿ ನನ್ನ ಬ್ಯಾನರ್ ಅಡಿಯಲ್ಲಿ ಸಿನಿಮಾ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇನೆ ಎಂದು ನಟ ಜಗ್ಗೇಶ್ ಹೇಳಿದ್ದಾರೆ.

ಟೈಟಲ್ ನೋಂದಾಯಿಸಿಕೊಳ್ಳುವ ವೇಳೆ ನೀರ್ ದೋಸೆ ನಿರ್ಮಾಪಕರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನನ್ನ ಬ್ಯಾನರ್ ಅಡಿ ಟೈಟಲ್ ರಿಜಿಸ್ಟರ್ ಮಾಡಿಸಿರುವುದಾಗಿ ತಿಳಿಸಿದ್ದಾರೆ.

ನಾನು ಎರಡು ವರ್ಷಗಳಿಂದ ಒಂದು ಕತೆ ಬರೆದಿದ್ದು, ಗಂಡ ಮತ್ತು ಹೆಂಡತಿ ನಡುವಿನ ಸಂಸಾರದ ಕತೆ ಇದಾಗಿದೆ. ನನ್ನ ಕತೆಗೆ ಒಂದು ಟೈಟಲ್ ಬೇಕಾಗಿತ್ತು. ಸರಿಯಾದ ಸಮಯದಲ್ಲಿ ಈ ಟೈಟಲ್ ನನಗೆ ಹೊಳೆಯಿತು. ಇದೇ ಟೈಟಲ್  ನನ್ನ ಕತೆಗೆ ಸೂಕ್ತ ಎಂದು ಅನಿಸಿದೆ ಎಂದು ಜಗ್ಗೇಶ್ ತಿಳಿಸಿದ್ದಾರೆ.

ನೀರ್ ದೋಸೆ ಯಶಸ್ಸಿನಿಂದ ಜಗ್ಗೇಶ್ ಖುಷಿಯಾಗಿದ್ದಾರೆ. ರಾಜ್ಯದ್ಯಂತ ಚಿತ್ರ ಉತ್ತಮ ಪ್ರದರ್ಶನ ಪಡೆಯುತ್ತಿದೆ. ನೀರ್ ದೋಸೆ ನಿಜವಾಗಿಯೂ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com