ರಾಜಕಾರಣಿಗಳನ್ನು ಕಿಚಾಯಿಸಲಿದ್ದಾರೆ ಹಂಬಲ್ ಪೊಲಿಟಿಷಿಯನ್ ನೊಗರಾಜ್

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಡ್ಯಾನಿಶ್ ಸೇಠ್ ಮತ್ತು ಸುಮುಕಿ ಸುರೇಶ್ ಅವರನ್ನು ಹಾಕಿಕೊಂಡು ನವ ನಿರ್ದೇಶಕ ಸಾದ್ ಖಾನ್ ಅವರು...
ಹಂಬಲ್ ಪೊಲಿಟಿಷಿಯನ್ ನೋಗರಾಜ್
ಹಂಬಲ್ ಪೊಲಿಟಿಷಿಯನ್ ನೋಗರಾಜ್
ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಡ್ಯಾನಿಶ್ ಸೇಠ್ ಮತ್ತು ಸುಮುಕಿ ಸುರೇಶ್ ಅವರನ್ನು ಹಾಕಿಕೊಂಡು ನವ ನಿರ್ದೇಶಕ ಸಾದ್ ಖಾನ್ ಅವರು ಹಂಬಲ್ ಪೊಲಿಟಿಷಿಯನ್ ನೊಗರಾಜ್ಎಂಬ ಚಿತ್ರವನ್ನು ನಿರ್ದೇಶಿಸಲಿದ್ದಾರೆ. 
ಚಿತ್ರದಲ್ಲಿ ಡ್ಯಾನಿಶ್ ಸೇಠ್ ಪೊಲಿಟಿಷಿಯನ್ ಪಾತ್ರದಲ್ಲಿ ನಟಿಸುತ್ತಿದ್ದು, ಶೃತಿ ಹರಿಹರನ್ ಮತ್ತು ರೋಜರ್ ನಾರಾಯಣ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ಸಾದ್ ಖಾನ್ ಹೇಳಿದ್ದಾರೆ. ಇನ್ನು ಚಿತ್ರೀಕರಣ ಕುರಿತಂತೆ ಕೆಲವೊಂದು ಭಾಗದ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಿದ್ದಾರೆ. 
ಶೃತಿ ಹರಿಹರನ್ ಮತ್ತು ರೋಜರ್ ನಾರಾಯಣ್ ಅವರ ನಡುವಿನ ಮಾತುಕತೆಯ ಕೆಲ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ. ಎರಡನೇ ಶೆಡ್ಯೂಲ್ ಮೇ ನಲ್ಲಿ ಪ್ರಾರಂಭವಾಗಲಿದೆ ಎಂದರು. 
ಚಿತ್ರವನ್ನು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ನಿರ್ಮಿಸಿರುವ ಪುಷ್ಕರ್ ಫಿಲಂಸ್ ಹಾಗೂ ನಿರ್ದೇಶಕ ಹೇಮಂತ್ ಮತ್ತು ರಕ್ಷಿತ್ ಶೆಟ್ಟಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com