ನಾಗ ಚೈತನ್ಯ ಸಮಂತಾ ಮದುವೆ ದಿನಾಂಕ ನಿಗದಿ: ಅಕ್ಟೋಬರ್‌ನಲ್ಲಿ ಮದುವೆ!

ಟಾಲಿವುಡ್ ನ ಯುವ ಜೋಡಿಗಳಾದ ನಾಗ ಚೈತನ್ಯ ಮತ್ತು ಸಮಂತಾ ರೂತೂ ಪ್ರಭು ಅವರ ಮದುವೆ ದಿನಾಂಕ ನಿಗದಿಯಾಗಿದೆ. ಇದೇ ವರ್ಷದ ಅಕ್ಟೋಬರ್ ನಲ್ಲಿ ಈ ಜೋಡಿಯ...
ಸಮಂತಾ-ನಾಗ ಚೈತನ್ಯ
ಸಮಂತಾ-ನಾಗ ಚೈತನ್ಯ
Updated on
ಟಾಲಿವುಡ್ ನ ಯುವ ಜೋಡಿಗಳಾದ ನಾಗ ಚೈತನ್ಯ ಮತ್ತು ಸಮಂತಾ ರೂತೂ ಪ್ರಭು ಅವರ ಮದುವೆ ದಿನಾಂಕ ನಿಗದಿಯಾಗಿದೆ. ಇದೇ ವರ್ಷದ ಅಕ್ಟೋಬರ್ ನಲ್ಲಿ ಈ ಜೋಡಿಯ ಮದುವೆ ಹೈದರಾಬಾದ್ ನಲ್ಲಿ ಅದ್ಧೂರಿಯಾಗಿ ನಡೆಯಲಿದೆಯಂತೆ. 
ಕಳೆದ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ನಾಗ ಚೈತನ್ಯ ಸಮಂತಾ ಜೋಡಿ 2017ರ ಜನವರಿ 29ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದು ಇದೀಗ ಅಕ್ಟೋಬರ್ ನಲ್ಲಿ ದಾಂಪತ್ಯ ಜೀವಕ್ಕೆ ಕಾಲಿಡಲಿದ್ದಾರೆ. 
ಅಕ್ಟೋಬರ್ ನಲ್ಲಿ ಮದುವೆ ನಡೆಯಲಿರುವುದರಿಂದ ಇಬ್ಬರು ಸ್ಟಾರ್ ನಟರು ತಮ್ಮ ಹೊಸ ಚಿತ್ರಗಳಿಂದ ಹಿಂದೆ ಸರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಈ ಜೋಡಿ ಅದ್ಧೂರಿಯಾಗಿ ವಿವಾಹ ಮಾಡಿಕೊಳ್ಳಲಿದ್ದು ಮದುವೆಗೆ ದಕ್ಷಿಣ ಭಾರತದ ಸ್ಟಾರ್ ನಟರನ್ನು ಆಹ್ವಾನಿಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com