ಧ್ರುವ್ ಸರ್ಜಾ ಪರಿಚಯಾತ್ಮಕ ಹಾಡಿನಲ್ಲಿ 'ಭರ್ಜರಿ' ಸ್ಟಂಟ್ಸ್

'ಭರ್ಜರಿ' ಸಿನೆಮಾದ ಕೊನೆಯ ಹಂತದ ಚಿತ್ರೀಕರಣಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಭಾರತದ ಹೊರಗೆ ಹಾಡಿನ ಚಿತ್ರೀಕರಣದ ಯೋಜಿಸಿಕೊಂಡಿದ್ದು, ಮೊದಲಿಗೆ ಧ್ರುವ್ ಸರ್ಜಾ ಮತ್ತು ಇಮ್ರಾನ್ ಸರ್ದಾರಿಯಾ
ಧ್ರುವ್ ಸರ್ಜಾ
ಧ್ರುವ್ ಸರ್ಜಾ
Updated on
ಬೆಂಗಳೂರು: 'ಭರ್ಜರಿ' ಸಿನೆಮಾದ ಕೊನೆಯ ಹಂತದ ಚಿತ್ರೀಕರಣಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಭಾರತದ ಹೊರಗೆ ಹಾಡಿನ ಚಿತ್ರೀಕರಣದ ಯೋಜಿಸಿಕೊಂಡಿದ್ದು, ಮೊದಲಿಗೆ ಧ್ರುವ್ ಸರ್ಜಾ ಮತ್ತು ಇಮ್ರಾನ್ ಸರ್ದಾರಿಯಾ ಸೇರಿದಂತೆ ಇಡೀ ತಂಡ ಬ್ಯಾಂಗ್ಕಾಕ್ ಗೆ ತೆರಳಲಿದೆ. 
ಧ್ರುವ್ ಅವರ ಪರಿಚಯಾತ್ಮಕ ಹಾಡಿನಲ್ಲಿ ಸಾಕಷ್ಟು ಆಕ್ಷನ್ ದೃಶ್ಯಗಳು ಇರಲಿವೆ ಮತ್ತು ಇದರಲ್ಲಿ ಸಾಕಷ್ಟು ಜಿಮ್ನಸ್ಟಿಕ್ಸ್ ಬಳಸಿರುವುದರಿಂದ ಇದನ್ನು ಥೈಲ್ಯಾಂಡ್ ರಾಜಧಾನಿಯಲ್ಲಿ ಚಿತ್ರೀಕರಿಸಲಾಗುತ್ತಿದೆ ಎಂದು ತಿಳಿದುಬಂದಿದೆ. 
ಶೂಟಿಂಗ್ ನಲ್ಲಿ ತಮ್ಮ ದಕ್ಷತೆಗೆ ಹೆಸರಾದ ನಟ ಧ್ರುವ್ ಈಗಾಗಲೇ ನೃತ್ಯ ನಿರ್ದೇಶಕ ಇಮ್ರಾನ್ ಜೊತೆಗೆ ನೃತ್ಯ ಶೈಲಿಗಳ ಅಭ್ಯಾಸ ಮಾಡುತ್ತಿದ್ದಾರಂತೆ. 
ಬ್ಯಾಂಗ್ಕಾಕ್ ನಂತರ ಚಿತ್ರತಂಡದ ಮುಂದಿನ ನಿಲ್ದಾಣ ಸ್ಲೊವೇನಿಯಾ. ಇಲ್ಲಿ ಎರಡು ಹಾಡುಗಳು ಚಿತ್ರೀಕರಣದ ನಂತರ ಸಿನೆಮಾ ಸಂಕಲನದ ಮೇಜಿಗೆ ಬರಲಿದೆ. 
ರಚಿತಾ ರಾಮ್ ಈ ಸಿನೆಮಾದಲ್ಲಿ ನಾಯಕನಟಿಯಾಗಿದ್ದರೆ, ಹರಿಪ್ರಿಯಾ ಮತ್ತು ವೈಶಾಲಿ ದೀಪಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿ ಹರಿಕೃಷ್ಣ ಸಂಗೀತ ನೀಡಿದ್ದು, ಶ್ರೀಶ ಕುಡುವಲ್ಲಿ ಸಿನೆಮ್ಯಾಟೋಗ್ರಾಫರ್. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com