ನಿಖಿಲ್ ಕುಮಾರ್ ಮುಂದಿನ ಸಿನೆಮಾಗೆ ಹೊಸ ಪ್ರತಿಭೆ

ರಿಯಾ ನಾಲ್ವಡೆ, ರೂಪದರ್ಶಿ ಮತ್ತು ೨೧೦೬ 'ಫ್ರೆಶ್ ಫೇಸ್' (ಹೊಸ ಮುಖ) ವಿಜೇತೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಬೆಂಗಳೂರು ಮೂಲದ ಈ ಬೆಡಗಿ 'ಜಾಗ್ವಾರ್' ಖ್ಯಾತಿಯ ನಿಖಿಲ್ ಕುಮಾರ್
ರಿಯಾ ನಾಲ್ವಡೆ
ರಿಯಾ ನಾಲ್ವಡೆ
Updated on
ಬೆಂಗಳೂರು: ರಿಯಾ ನಾಲ್ವಡೆ, ರೂಪದರ್ಶಿ ಮತ್ತು ೨೧೦೬ 'ಫ್ರೆಶ್ ಫೇಸ್' (ಹೊಸ ಮುಖ) ವಿಜೇತೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಬೆಂಗಳೂರು ಮೂಲದ ಈ ಬೆಡಗಿ 'ಜಾಗ್ವಾರ್' ಖ್ಯಾತಿಯ ನಿಖಿಲ್ ಕುಮಾರ್ ಅವರ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 
ಇದು ನಿಖಿಲ್ ಅವರ ಎರಡನೇ ಸಿನೆಮಾ. ಚೇತನ್ ಕುಮಾರ್ ನಿರ್ದೇಶನದ ಈ ಸಿನೆಮಾಗೆ ಹೊಸ ಪ್ರತಿಭೆಯನ್ನು ತಂಡ ಹುಡುಕುತ್ತಿತ್ತು. ಈಗ ರಿಯಾ ಅವರನ್ನು ತಂಡ ಅಂತಿಮಗೊಳಿಸಿದೆ. 
ಇದಕ್ಕಾಗಿ ಆಡಿಷನ್ ನಡೆಸಿದ್ದ ಚಿತ್ರತಂಡ ೬೦೦ ಜನರಿಂದ ಅರ್ಜಿಗಳನ್ನು ಸ್ವೀಕರಿಸಿತ್ತಂತೆ. 'ಜಾಗ್ವಾರ್' ಸಿನೆಮಾದಲ್ಲಿ ನಿಖಿಲ್ ಎದುರಿಗೆ ದೀಪ್ತಿ ಸಾಟಿ ನಟಿಸಿದ್ದರು. 
೧೭ ವರ್ಷದ ರಿಯಾ ನೃತ್ಯಗಾರ್ತಿ ಕೂಡ. 'ಭರ್ಜರಿ' ಖ್ಯಾತಿಯ ಚೇತನ್ ನಿರ್ದೇಶನದ ಈ ಸಿನೆಮಾದ ವಿವರಗಳ ಬಗ್ಗೆ ಅಧಿಕೃತ ಘೋಷಣೆಗೆ ಕಾಯಲಾಗುತ್ತಿದೆ. ಹಾಗೆಯೇ ಉಳಿದ ತಾರಾಗಣದ ಆಯ್ಕೆ ಕೂಡ ಜಾರಿಯಲ್ಲಿದೆ. 
ವಿ ಹರಿಕೃಷ್ಣ ಸಂಗೀತ ನೀಡುತ್ತಿದ್ದು, ಶ್ರೀಶಾ ಕುಡುವಲ್ಲಿ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com