ಒಡೆಯರ್ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಾಕ್ಸರ್

ಸ್ಯಾಂಡಲ್ ವುಡ್ ಕ್ರೀಡೆಯಾಧಾರಿತ ಸಿನಿಮಾಗಳ ತಯಾರಿಕೆಗೆ ಹೆಚ್ಚಿನ ಆಸಕ್ತಿ ತೋರುತ್ತಿದೆ. ಎಸ್ .ಕೃಷ್ಣ ನಿರ್ದೇಶನದಲ್ಲಿ ಸಿನಿಮಾದಲ್ಲಿ ...
ದರ್ಶನ್
ದರ್ಶನ್
ಬೆಂಗಳೂರು: ಸ್ಯಾಂಡಲ್ ವುಡ್  ಕ್ರೀಡೆಯಾಧಾರಿತ ಸಿನಿಮಾಗಳ ತಯಾರಿಕೆಗೆ ಹೆಚ್ಚಿನ ಆಸಕ್ತಿ ತೋರುತ್ತಿದೆ. ಎಸ್ .ಕೃಷ್ಣ ನಿರ್ದೇಶನದಲ್ಲಿ ಸಿನಿಮಾದಲ್ಲಿ ಸುದೀಪ್ ಕೂಡ ಕ್ರೀಡಾಪಟುವಾಗಿ ನಟಿಸುತ್ತಿದ್ದಾರೆ.
ಪವನ್ ಒಡೆಯರ್ ನಿರ್ದೇಶನದ ದರ್ಶನ್ 51 ನೇ ಸಿನಿಮಾಗೆ ಒಡೆಯರ್ ಎಂದು ಟೈಟಲ್ ಇಡಲಾಗಿದೆ. ಇದರಲ್ಲಿ ದರ್ಶನ್ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. 
ದರ್ಶನ್ ಕರಿಯರ್​ನಲ್ಲೇ ಇಂಥದ್ದೊಂದು ವಿಶಿಷ್ಟವಾದ ಪಾತ್ರ ಮಾಡುತ್ತಿ ರುವುದು ಮತ್ತು ಕ್ರೀಡೆಯನ್ನಾಧರಿಸಿದ ಸಿನಿಮಾ ಇದೇ ಮೊದಲು ಎಂದು ಹೇಳಲಾಗುತ್ತಿದೆ. 
ಸಂದೇಶ್ ಎನ್ ಪವನ್ ನಿರ್ಮಾಣದ ಸಿನಿಮಾ ತಂಡ ಶೀಘ್ರವೇ ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರುವಾಗಲಿದೆ.  ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ದರ್ಶನ್ ಗಾಗಿ ಟ್ರೇಲರ್ ನಿರ್ಮಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಚಿತ್ರದಲ್ಲಿ ಭರ್ಜರಿಯಾದ ಬಾಕ್ಸಿಂಗ್ ದೃಶ್ಯಗಳಿರಲಿದ್ದು, ಕ್ಲೈಮ್ಯಾಕ್ಸ್ ದೃಶ್ಯವನ್ನು ಅದ್ದೂರಿಯಾಗಿ ಚಿತ್ರೀಕರಿಸಲು ಪ್ಲ್ಯಾನ್ ಹಾಕಿಕೊಂಡಿದೆಯಂತೆ ಚಿತ್ರತಂಡ. 
ಕುರುಕ್ಷೇತ್ರ ಸಿನಿಮಾದಲ್ಲಿ ದರ್ಶನ್ ನಿರತರಾಗಿದ್ದು ಅದು ಮುಗಿಯುತ್ತಿದ್ದಂತೆಯೇ ಅಂದರೆ ಡಿಸೆಂಬರ್ ಇಲ್ಲವೇ ಜನವರಿಯಲ್ಲಿ ಸಿನಿಮಾ ಶೂಟಿಂಗ್ ಆರಂಭಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com