ಹೊಸತನದತ್ತ ನಿಖಿಲ್ ಹೆಜ್ಜೆ: ಬಿಗ್ ಬಜೆಟ್ ನ ಕೌಟುಂಬಿಕ ಸಿನಿಮಾದಲ್ಲಿ ನಟನೆ

ನಟ ನಿಖಿಲ್ ಕುಮಾರ್ ಇತ್ತೀಚೆಗೆ ಫುಲ್ ಬ್ಯುಸಿ ಆಗಿದ್ದಾರೆ, ಸದ್ಯ ಕುರುಕ್ಷೇತ್ರ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ನಿರ್ದೇಶಕ ಮಹೇಶ್ ರಾವ್ ಅವರ ಸಿನಿಮಾದಲ್ಲಿ ..
ನಿಖಿಲ್ ಕುಮಾರ್
ನಿಖಿಲ್ ಕುಮಾರ್
ಬೆಂಗಳೂರು: ನಟ ನಿಖಿಲ್ ಕುಮಾರ್ ಇತ್ತೀಚೆಗೆ ಫುಲ್ ಬ್ಯುಸಿ ಆಗಿದ್ದಾರೆ, ಸದ್ಯ ಕುರುಕ್ಷೇತ್ರ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ನಿರ್ದೇಶಕ ಮಹೇಶ್ ರಾವ್ ಅವರ ಸಿನಿಮಾದಲ್ಲಿ ನಿಖಿಲ್ ಅಭಿನಯಿಸಲಿದ್ದಾರೆ.
ಇನ್ನೂ ಟೈಟಲ್ ಇಡದ ಸಿನಿಮಾದ ಕಥೆ ಹೊಸತಾಗಿದೆ. ಅಕ್ಟೋಬರ್ ನಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದ್ದು, ನಿಖಿಲ್ ಕುಮಾರ್ ಫರ್ಸ್ಟ್ ಲುಕ್ ರಿಲೀಸ್ ಆಗಿದೆ. ಚೆನ್ನಾಂಬಿಕಾ ಫಿಲಮ್ಸ್ ಪ್ರೊಡಕ್ಷನ್ ನಲ್ಲಿ ಮಹೇಶ್ ರಾವ್ ನಿರ್ದೇಶನದ ಈ ಸಿನಿಮಾ ಬಿಗ್ ಬಜೆಟ್ ಚಿತ್ರವಾಗಿದೆ. 
ಕನ್ನಡದಲ್ಲಿ ಸೂರ್ಯವಂಶ, ಚಂದ್ರಚಕೋರಿ ಮತ್ತು ತೆಲುಗಿನ ಸರಾಯಿನೋದು   ಲೆಜೆಂಡ್ ಮತ್ತು ಜೈ ಜಾನಕಿ ನಾಯಕ ದಂತ ಸಿನಿಮಾ ನಿರ್ಮಿಸಿರುವ ರಾಜಕಾರಣಿ ಹಾಗೂ ನಿರ್ಮಾಪಕ ಕುಮಾರಸ್ವಾಮಿ,  ತಮ್ಮ ಪುತ್ರ ನಿಖಿಲ್ ಕೂಡ ಕೌಟುಂಬಿಕ ಸಿನಿಮಾಗಳಲ್ಲಿ ನಟಿಸಬೇಕೆಂದು ಬಯಸಿದ್ದಾರೆ.
ಸಿನಿಮಾ ಸ್ಕ್ರಿಪ್ಟ್ ಅಂತಿಮವಾಗಿದ್ದು, ನಿಖಿಲ್ ಮೊದಲ ಸಿನಿಮಾದಲ್ಲಿ ನಟಿಸಬೇಕಿದ್ದ ರಿಯಾ ನಾಲ್ವಡೆ ಈ ಸಿನಿಮಾದಲ್ಲಿ ನಟಿಸಬೇಕಿತ್ತು. ಆಕೆ ಹೊಸ ನಟಿಯಾಗಿರುವುದರಿಂದ ಅನುಭವ ಸಾಲದು ಕಥೆಗೆ ಆಕೆಯಿಂದ ನ್ಯಾಯ ದೊರಕುವುದಿಲ್ಲ ಎಂದು ನಿರ್ಧರಿಸಿರುವ ಚಿತ್ರತಂಡ ಬೇರೆ ನಾಯಕಿಯ ಹುಡುಕಾಟದಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com