ಪ್ರಯೋಗಾತ್ಮಕ ಚಿತ್ರಕ್ಕೆ ದೇವರಾಜ್ ಒತ್ತು: ಮುಂದಿನ ಚಿತ್ರದಲ್ಲಿ ಕಿವುಡ, ಮೂಗನ ಪಾತ್ರ

ಕನ್ನಡದ ಚಿತ್ರರಂಗದ ಡೈನಮಿಕ್ ಸ್ಟಾರ್ ದೇವರಾಜ್ ಸದ್ಯ ಪ್ರಯೋಗಾತ್ಮಕ ಚಿತ್ರಗಳಿಗೆ ಒತ್ತು ನೀಡುತ್ತಿದ್ದು ತಮ್ಮ ಮುಂದಿನ ಚಿತ್ರದಲ್ಲಿ ಕಿವುಡು ಹಾಗೂ ಮೂಗನ ಪಾತ್ರದಲ್ಲಿ...
ದೇವರಾಜ್
ದೇವರಾಜ್
Updated on: 
ಕನ್ನಡದ ಚಿತ್ರರಂಗದ ಡೈನಮಿಕ್ ಸ್ಟಾರ್ ದೇವರಾಜ್ ಸದ್ಯ ಪ್ರಯೋಗಾತ್ಮಕ ಚಿತ್ರಗಳಿಗೆ ಒತ್ತು ನೀಡುತ್ತಿದ್ದು ತಮ್ಮ ಮುಂದಿನ ಚಿತ್ರದಲ್ಲಿ ಕಿವುಡು ಹಾಗೂ ಮೂಗನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. 
ಅರುಣ್ ಗೌಡ ಮತ್ತು ಕಾವ್ಯ ಶೆಟ್ಟಿ ಅಭಿನಯದ 3 ಗಂಟೆ 30 ದಿನ 30 ಸೆಕೆಂಡ್ ಚಿತ್ರದಲ್ಲಿ ದೇವರಾಜ್ ಅವರು ನಿವೃತ್ತ ಸೇನಾ ಅಧಿಕಾರಿ ಪಾತ್ರವನ್ನು ಮಾಡುತ್ತಿದ್ದು ಕಿವುಡು ಹಾಗೂ ಮೂಗನಾಗಿ ಕಾಣಿಸಿಕೊಳ್ಳಲಿದ್ದಾರೆ. 
ಕಿವುಡು ಹಾಗೂ ಮೂಗನ ಪಾತ್ರ ಮಾಡುವುದು ತುಂಬಾ ಚಾಲೆಂಜಿಂಗ್ ಆಗಿತ್ತು. ಅದನ್ನು ನಾನು ಸರಿಯಾಗಿ ನಿಭಾಯಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ದೇವರಾಜ್ ಗೆ ಸುಧಾರಾಣಿ ಜತೆಯಾಗಲಿದ್ದಾರೆ.
3 ಗಂಟೆ 30 ದಿನ 30 ಸೆಕೆಂಡ್ ಚಿತ್ರಕ್ಕೆ ವಿ ಶ್ರೀಧರ್ ಸಂಗೀತ ಸಂಯೋಜಿಸುತ್ತಿದ್ದು ಶ್ರೀನಿವಾಸ್ ರಾಮಯ್ಯ ಛಾಯಾಗ್ರಾಹಣವಿದೆ. ಚಿತ್ರವನ್ನು ಜಿಕೆ ಮಧುಸೂದನ್ ನಿರ್ದೇಶಿಸಿದ್ದು ಚಂದ್ರಶೇಖರ್ ಎಂಬುವರು ಚಿತ್ರವನ್ನು ನಿರ್ಮಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com