ಶಿವರಾಜ್ ಕುಮಾರ್ ನಟನೆಯ ಟಗರು ಚಿತ್ರ ಸುದ್ದಿಯಲ್ಲಿದ್ದು, ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್ ಆಡಿಯೋ ಹಕ್ಕುಗಳನ್ನು ಖರೀದಿಸಿದೆ ಎಂಬ ಸುದ್ದಿಯ ನಂತರ ಈಗ ಆಡಿಯೋ ಲಾಂಚ್ ಗೆ ಸ್ಟಾರ್ ಗಳ ದಂಡು ಆಗಮಿಸಲಿದೆ ಎಂಬುದು ತಾಜಾ ಸುದ್ದಿಯಾಗಿದೆ.
ಡಿ.23 ರಂದು ಹೊಸಪೇಟೆಯಲ್ಲಿ ಅದ್ಧೂರಿ ಸಮಾರಂಭ ನಡೆಯಲಿದ್ದು, ಪುನೀತ್ ರಾಜ್ ಕುಮಾರ್, ಶ್ರೀ ಮುರುಳಿ, ಧೃವ ಸರ್ಜಾ, ಧನಂಜಯ್, ವಸಿಷ್ಠ ಸಿಂಹ, ಮನ್ವಿತಾ ಹರೀಶ್ ಸೇರಿದಂತೆ ಹಲವು ಸ್ಟಾರ್ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಚಿತ ಪಟುಕೋಣೆ, ಕಾವ್ಯಾ ಶಾ, ಟಗರು ಚಿತ್ರಕ್ಕೆ ಸಂಗೀತ ನಿರ್ದೇಶಕ ಚರನ್ ರಾಜ್ ಪ್ರದರ್ಶನ ನೀಡಲಿದ್ದಾರೆ. 2018ರ ಲ್ಲಿ ಬಿಡುಗಡೆಯಾಗಲು ಸಿದ್ಧವಾಗಿರುವ ಚಿತ್ರಗಳ ಪೈಕಿ ಟಗರು ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ.