ಮುಂಬೈ: ಬಾಲಿವುಡ್ ನಟರಾದ ಆಲಿಯಾ ಭಟ್ ಮತ್ತು ವರುಣ್ ಧವನ್ ರಿಗೆ ಹಿರಿಯ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರ ಪ್ರಸಿದ್ಧ ಹಾಡು-ನೃತ್ಯದ ಸ್ಟೆಪ್ ಗಳನ್ನು ಹೇಳಿಕೊಟ್ಟಿದ್ದಾರೆ.
೧೯೮೯ ರಲ್ಲಿ ಮಾಧುರಿ ನಟಿಸಿದ್ದ 'ಠಾಣೆದಾರ' ಸಿನೆಮಾದ 'ತಮ್ಮಾ ತಮ್ಮಾ' ಮರುಸೃಷ್ಟಿಯಲ್ಲಿ ವರುಣ್ ಮತ್ತು ಆಲಿಯಾ ನಟಿಸಿ ಹೆಜ್ಜೆಹಾಕಿದ್ದಾರೆ. ಈ ಆವೃತ್ತಿ ಅವರ ಮುಂದಿನ ಸಿನೆಮಾ 'ಬದ್ರಿನಾಥ್ ಕಿ ದುಲ್ಹನಿಯಾ' ಸಿನೆಮಾದಲ್ಲಿ ಮೂಡಿಬರಲಿದೆ.
ಶುಕ್ರವಾರ ಈ ಹಾಡು-ನೃತ್ಯದ ಮೇಕಿಂಗ್ ವಿಡಿಯೋವೊಂದನ್ನು ಟ್ವಿಟ್ಟರ್ ಮೂಲಕ ಆಲಿಯಾ ಹಂಚಿಕೊಂಡಿದ್ದಾರೆ. ಈ ಜೋಡಿ ಹಿಂದೆ 'ಸ್ಟೂಡೆಂಟ್ ಆಫ್ ದ ಇಯರ್' ಮತ್ತು 'ಹಂಟಿ ಶರ್ಮ ಕಿ ದುಲ್ಹನಿಯಾ' ಸಿನೆಮಾಗಳಲ್ಲಿ ನಟಿಸಿತ್ತು.
"ಈ 'ತಮ್ಮಾ' ಸ್ಟೆಪ್ ಮಾಡುವುದು ಹೇಗೆ? ಸಹಾಯ ಮಾಡಿದ್ದಕ್ಕೆ ಮಾಧುರಿ ದೀಕ್ಷಿತ್ ಅವರಿಗೆ ಧನ್ಯವಾದಗಳು. .. ವರುಣ್ ಧವನ್.. ಮತ್ತೆ 'ತಮ್ಮಾ ತಮ್ಮಾ'" ಎಂದು ವಿಡಿಯೋ ಬಗ್ಗೆ ಬರೆದಿದ್ದಾರೆ ಆಲಿಯಾ.
'ಬದ್ರಿನಾಥ್ ಕಿ ದುಲ್ಹನಿಯಾ' ಮಾರ್ಚ್ ೧೦ಕ್ಕೆ ತೆರೆ ಕಾಣಲಿದೆ.