ಶಿವರಾತ್ರಿಯಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರ 3 ಸಿನಿಮಾಗಳಿಗೆ ಮುಹೂರ್ತ

2017ನೇ ವರ್ಷದ ರವಿಚಂದ್ರನ್ ಅಭಿನಯದ ಮೊದಲ ಸಿನಿಮಾ ಹೆಬ್ಬುಲಿ ನಾಳೆ ತೆರೆ ಕಾಣಲಿದೆ. ಸುದೀಪ್ ಜೊತೆ ರವಿಚಂದ್ರನ್ ಕೂಡ ಈ ಸಿನಿಮಾದಲ್ಲಿ ...
ರವಿಚಂದ್ರನ್
ರವಿಚಂದ್ರನ್

ಬೆಂಗಳೂರು: 2017ನೇ ವರ್ಷದ ರವಿಚಂದ್ರನ್ ಅಭಿನಯದ  ಮೊದಲ ಸಿನಿಮಾ ಹೆಬ್ಬುಲಿ ನಾಳೆ ತೆರೆ ಕಾಣಲಿದೆ. ಸುದೀಪ್ ಜೊತೆ ರವಿಚಂದ್ರನ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಶುಕ್ರವಾರ ಶಿವರಾತ್ರಿ ಹಬ್ಬದಂದು ರವಿಚಂದ್ರನ್ ಅವರ ಮೂರು ಸಿನಿಮಾಗಳಿಗೆ ಮುಹೂರ್ಥ ನಡೆಯಲಿದೆ. ಎರಡು ಸಿನಿಮಾದಲ್ಲಿ ರವಿಚಂದ್ರನ್ ನಟಿಸುತ್ತಿದ್ದು, ಮತ್ತೊಂದು ಸಿನಿಮಾ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ಕರ್ವ ಸಿನಿಮಾ ಖ್ಯಾತಿಯ ನವನೀತ್ ನಿರ್ದೇಶನದ ಸಿನಿಮಾದಲ್ಲಿ ರವಿಚಂದ್ರನ್ ಅಭಿನಯಿಸುತ್ತಿದ್ದಾರೆ. ಕ್ರೇಜಿ ಸ್ಟಾರ್ ಅವರ ಮತ್ತೊಂದು ಸಿನಿಮಾಗೆ ಎಂ.ಎಸ್ ರಮೇಶ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ,ಮತ್ತೊಂದು ಸಿನಿಮಾವನ್ನು ರವಿಚಂದ್ರನ್ ಅವರೇ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾಕ್ಕಾಗಿ ಚಿತ್ರಕಥೆ ಬರೆಯುತ್ತಿದ್ದಾರೆ.

ಸಿನಿಮಾದಲ್ಲಿ ಸ್ಟಾರ್ ಗಳು ಮಾಡು ಪಾತ್ರದಿಂದ ಚಿತ್ರದ ಮೌಲ್ಯ ಹೆಚ್ಚುವಂತೆ ಮಾಡುತ್ತದೆ. ಜನರಿಗೆ ಹೇಗೆ ಇಷ್ಟವಾಗುತ್ತದೋ ಆ ರೀತಿಯೇ ಸಿನಿಮಾ ನಿರ್ದೇಶನ ಮಾಡಬೇಕಾಗುತ್ತದೆ ಇದಕ್ಕಾಗಿ ನಿರ್ದೇಶನದ ಔಟ್ ಲುಕ್ ಕೂಡ ಬದಲಾಗಬೇಕು ಎಂದು ರವಿಚಂದ್ರನ್ ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com