'ಅನು ಆಂಟಿ' ಸುಮಖಿ 'ಹಂಬಲ್ ಪೊಲಿಟಿಶಿಯನ್ ನೊಗರಾಜ್' ಪತ್ನಿ

ಹಾಸ್ಯ ಶೋಗಳನ್ನೂ ನೀಡುವ ಡ್ಯಾನಿಷ್ ಸೈತ್ ನಟಿಸುತ್ತಿರುವ ಸಾದ್ ಖಾನ್ ನಿರ್ದೇಶನದ 'ಹಂಬಲ್ ಪೊಲಿಟಿಶಿಯನ್ ನೊಗರಾಜ್' ಹಲವು ಕುತೂಹಲಗಳನ್ನು ಹುಟ್ಟಿಸಿದೆ. ಈಗ ಅಂತರ್ಜಾಲದಲ್ಲಿ
ಪುಷ್ಕರ್ ಮಲ್ಲಿಕಾರ್ಜುನಯ್ಯ, ಹೇಮಂತ ರಾವ್, ಸಾದ್ ಖಾನ್ ಮತ್ತು ಡ್ಯಾನಿಷ್ ಸೈತ್
ಪುಷ್ಕರ್ ಮಲ್ಲಿಕಾರ್ಜುನಯ್ಯ, ಹೇಮಂತ ರಾವ್, ಸಾದ್ ಖಾನ್ ಮತ್ತು ಡ್ಯಾನಿಷ್ ಸೈತ್
ಬೆಂಗಳೂರು: ಹಾಸ್ಯ ಶೋಗಳನ್ನೂ ನೀಡುವ ಡ್ಯಾನಿಷ್ ಸೈತ್ ನಟಿಸುತ್ತಿರುವ ಸಾದ್ ಖಾನ್ ನಿರ್ದೇಶನದ 'ಹಂಬಲ್ ಪೊಲಿಟಿಶಿಯನ್ ನೊಗರಾಜ್' ಹಲವು ಕುತೂಹಲಗಳನ್ನು ಹುಟ್ಟಿಸಿದೆ. ಈಗ ಅಂತರ್ಜಾಲದಲ್ಲಿ ಪ್ರಖ್ಯಾತವಾಗಿರುವ 'ಅನು ಆಂಟಿ' ಖ್ಯಾತಿಯ ಸುಮುಖಿ ಸುರೇಶ್ ಕೂಡ ಚಿತ್ರತಂಡವನ್ನು ಸೇರಿರುವುದು ವಿಶೇಷ. 
ಸಾದ್ ಅವರ ಕಾಮಿಡಿ ಶೋ 'ಇಂಪ್ರೂವ್' ನಲ್ಲಿ ಸುಮುಖಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರಂತೆ. ಈಗ ಸಾದ್ ಅವರ ರಾಜಕೀಯ ವಿಡಂಬನ ಚಿತ್ರ  'ಹಂಬಲ್ ಪೊಲಿಟಿಶಿಯನ್ ನೊಗರಾಜ್'ನಲ್ಲಿ ಪಾದಾರ್ಪಣೆ ಮಾಡಲಿದ್ದಾರೆ. ಈ ಇಂಗ್ಲಿಷ್-ಕನ್ನಡ ಸಿನೆಮಾದಲ್ಲಿ ನೊಗರಾಜ್ ಪತ್ನಿಯ ಪಾತ್ರದಲ್ಲಿ ಸುಮುಖಿ ಕಾಣಿಸಿಕೊಳ್ಳಲಿದ್ದಾರೆ. 
ಈ ಸಿನೆಮಾವನ್ನು ಪುಷ್ಕರ್ ಫಿಲಂಸ್ ಮತ್ತು ನಿರ್ದೇಶಕ ಹೇಮಂತ ರಾವ್ ಒಡೆತನದ ಲಾಸ್ಟ್ ಅಂಡ್ ಫೌಂಡ್ ಫಿಲಂಸ್ ಜಂಟಿಯಾಗಿ ನಿರ್ಮಿಸುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com