ಕೋಟಿಗೊಬ್ಬ-3 ಸಿನಿಮಾಗಾಗಿ ಸುದೀಪ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೆ?

ನಾಯಕ ನಟರುಗಳ ಸಿನಿಮಾ ಹಿಟ್ ಆಗುತ್ತಿದ್ದಂತೆ ಅವರು ಪಡೆಯುವ ಸಂಭಾವನೆ ಕೂಡ ಏರುತ್ತದೆ. ಸದ್ಯ ಕಿಚ್ಚ ಸುದೀಪ್ ತಾವು ಪಡೆಯುವ ಸಂಭಾವನೆ ಕೂಡ ...
ಸುದೀಪ್
ಸುದೀಪ್
ಬೆಂಗಳೂರು: ನಾಯಕ ನಟರುಗಳ ಸಿನಿಮಾ ಹಿಟ್ ಆಗುತ್ತಿದ್ದಂತೆ ಅವರು ಪಡೆಯುವ ಸಂಭಾವನೆ ಕೂಡ ಏರುತ್ತದೆ. ಸದ್ಯ ಕಿಚ್ಚ ಸುದೀಪ್ ತಾವು ಪಡೆಯುವ ಸಂಭಾವನೆ ಕೂಡ ಏರಿಸಿಕೊಂಡಿದ್ದಾರೆ.
ಈ ಹಿಂದೆ ಕೋಟಿಗೊಬ್ಬ-2 ಚಿತ್ರ ಮಾಡಿದ್ದ ನಿರ್ಮಾಪಕ ಸೂರಪ್ಪ ಬಾಬು ಮತ್ತು ಸುದೀಪ್ ಮತ್ತೆ ಒಟ್ಟಾಗಿ ಕೋಟಿಗೊಬ್ಬ-3 ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗಾಗಿ ಸುದೀಪ್ ಗೆ 8 ಕೋಟಿ ರು ಸಂಭಾವನೆ ನೀಡಲು ಸೂರಪ್ಪ ಬಾಬು ಒಪ್ಪಿದ್ದಾರೆ ಎನ್ನಲಾಗಿದೆ. 
ಸುದೀಪ್ ಗೆ ಸೂರಪ್ಪ ಬಾಬು ಅಡ್ವಾನ್ಸ್ ಕೂಡ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸುದೀಪ್ ಅವರ ಡೇಟ್ಸ್ ಗಳನ್ನ ಹೊಂದಿಸಿಕೊಂಡು  ಚಿತ್ರತಂಡ ಶೀಘ್ರವೇ  ಸಿನಿಮಾ ಶೂಟಿಂಗ್ ಆರಂಭಿಸಲಿದೆ. ಕೋಟಿಗೊಬ್ಬ-3 ಸಿನಿಮಾ ಬಗ್ಗೆ ಸೂರಪ್ಪ ಬಾಬು ಇದುವರೆಗೂ ಎಲ್ಲಿಯೂ ಬಾಯಿಬಿಟ್ಟಿಲ್ಲ, ಆದರೆ ಸುದೀಪ್ ಜೊತೆ ಕೆಲಸ ಮಾಡುವುದರ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ.
ಇದು ಸುದೀಪ್ ಅವರ ಸಿನಿಮಾವಾಗಿದ್ದು, ಸುದೀಪ್ ಅಭಿಮಾನಿಗಳಿಗಾಗಿಯೇ ಈ ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದಾರೆ. ಸುದೀಪ್ ಟ್ವೀಟ್ ಮೂಲಕ ವಿಷಯ ಖಚಿತ ಪಡಿಸಿದ್ದಾರೆ. 
ಸಿನಿಮಾಗಾಗಿ ಚೆನ್ನೈ ನಲ್ಲಿ ಸ್ಕ್ರಿಪ್ಟ್ ತಯಾರಾಗುತ್ತಿದ್ದು, ನಿರ್ದೇಶಕರು ಸ್ಕ್ರಿಪ್ಟ್ ಅಂತಿಮಗೊಳಿಸಬೇಕಾಗಿದೆ. 
ಸದ್ಯ ಸುದೀಪ್ ರಕ್ಷಿತ್ ಶೆಟ್ಟಿ ಯ ಥಗ್ಸ್ ಆಫ್ ಮಾಲ್ಗುಡಿ  ಮತ್ತು ರಿಶಬ್ ಶೆಟ್ಟಿ ಅವರ ಪೈಪ್ ಲೈನ್ ಸಿನಿಮಾ ದಲ್ಲಿ ತೊಡಗಿಸಿಕೊಂಡಿದ್ದಾರೆ.
ಹೆಬ್ಬುಲಿ ಚಿತ್ರದ ನಂತರ ಸುದೀಪ್ ಮತ್ತು ನಿರ್ದೇಶಕ ಕೃಷ್ಣ ಒಟ್ಟಿಗೆ ವಿಲನ್ ಸಿನಿಮಾ ಮಾಡುತ್ತಿದ್ದು, ಸದ್ಯದಲ್ಲೇ ಶೂಟಿಂಗ್ ಪೂರ್ಣಗೊಳ್ಳಲಿದೆ, ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ ಕೃಷ್ಣ ಸಿನಿಮಾ ನಂತರ ಬಾಬು ಸಿನಿಮಾ ಕೂಡ ಆರಂಭವಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com