ವಿನಾಕಾರಣ ಯಾರ ಬಳಿಯೂ ಕ್ಷಮೆ ಕೇಳಲ್ಲ: ನಟ ಕಮಲ್ ಹಾಸನ್

ತಮಿಳು ಬಿಗ್ ಬಾಸ್ ವಿವಾದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ನಟ ಕಮಲ್ ಹಾಸನ್ ವಿನಾಕಾರಣ ತಾವು ಯಾರ ಬಳಿಯೂ ಕ್ಷಮೆ ಕೇಳಲ್ಲ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ತಮಿಳು ಬಿಗ್ ಬಾಸ್ ವಿವಾದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ನಟ ಕಮಲ್ ಹಾಸನ್ ವಿನಾಕಾರಣ ತಾವು ಯಾರ ಬಳಿಯೂ  ಕ್ಷಮೆ ಕೇಳಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಕಮಲ್ ಹಾಸನ್, ನಾನು ಕ್ಷಮೆ ಕೋರಬೇಕು ಎಂದು ಮಹಿಳೆಯರು ಕೇಳುತ್ತಿದ್ದಾರೆ. ನಾನು ಅವರನ್ನು ಪ್ರೀತಿಸುತ್ತೇನೆ. ಅವರಿಗಾಗಿ ಹೋರಾಡುತ್ತೇನೆ. ಆದರೆ ವಿನಾಕಾರಣ ಯಾರ  ಬಳಿಯೂ ಕ್ಷಮೆ ಕೇಳಲ್ಲ ಎಂದು ಹೇಳಿದ್ದಾರೆ. ಅಂತೆಯೇ  ಲೈಂಗಿಕ ದೌರ್ಜನ್ಯಒಳಗಾದ ನಟಿಯ ಹೆಸರು ಹೇಳಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಟ ಕಮಲ್, ಯಾವುದೇ ಕಾರಣಕ್ಕೂ ನಾನು ಆ  ನಟಿ ಹೆಸರು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಹೆಸರು ಹೇಳಲೇಬೇಕು ಎಂದಾದರೆ, ಮೊದಲು ನನ್ನ ತಾಯಿ ಅಥವಾ ಮಗಳ ಬಳಿಕವೇ ಆಕೆಯ ಹೆಸರು ಹೇಳುತ್ತೇನೆ ಎಂದೂ ಹೇಳಿದ್ದಾರೆ.

ಆ ಮೂಲಕ ತಾವು ಆ ನಟಿ ಹೆಸರು ಹೇಳಿಲ್ಲ ಎಂದು ಪರೋಕ್ಷವಾಗಿ ಸ್ಪಷ್ಟನೆ ನೀಡಿದ್ದಾರೆ. ಅಂತೆಯೇ ಇದರ ಹೊರತಾಗಿಯೂ ನೀವು ಕ್ಷಮೆ ಕೇಳಬೇಕು ಎಂದು ಕೇಳಿದರೆ ನಾನು ಖಂಡಿತಾ ಕ್ಷಮೆ ಕೇಳುತ್ತೇನೆ, ಕಾನೂನಿಗಿಂತ ಯಾರೂ  ದೊಡ್ಡವರಲ್ಲ. ಕಾನೂನಿಗಿಂತ ದೊಡ್ಡವರು ಯಾರಾದರೂ ಇದ್ದಾರೆ ಎಂದು ಅದು ಆ ದೇವರು ಮಾತ್ರ ಎಂದು ಕಮಲ್ ಟ್ವೀಟ್ ಮಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ತಮಿಳಿನಲ್ಲಿ ಆರಂಭವಾದ ಬಿಗ್ ಬಾಸ್ ಷೋ ಅಶ್ಲೀಲವಾಗಿದೆ. ಷೋದ ಅಭ್ಯರ್ಥಿಗಳು ಅಶ್ಲೀಲವಾಗಿ ಮಾತನಾಡುತ್ತಿದ್ದಾರೆ ಎಂದು ತಮಿಳು ಹಿಂದೂ ಮಕ್ಕಳ್ ಕಚ್ಚಿ ಎಂಬ ಸಂಘಟನೆ ದೂರು ಸಲ್ಲಿಕೆ  ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com