ರಮೇಶ್ ಅರವಿಂದ್ 101 ನೇ ಸಿನಿಮಾಗೆ ಮತ್ತೆ ರವೀಂದ್ರನಾಥ್ ನಿರ್ದೇಶನ

ಇದುವರೆಗೂ 100 ಸಿನಿಮಾಗಳಲ್ಲಿ ನಟಿಸಿ ತಮ್ಮ ಅಭಿನಯ ಚತುರತೆ ತೋರಿರುವ ನಟ ರಮೇಶ್ ಅರವಿಂದ್ ಅವರ 101 ನೇ ಸಿನಿಮಾವನ್ನು ...
ರಮೇಶ್ ಅರವಿಂದ್ ಮತ್ತು ರವೀಂದ್ರನಾಥ್
ರಮೇಶ್ ಅರವಿಂದ್ ಮತ್ತು ರವೀಂದ್ರನಾಥ್
Updated on
ಬೆಂಗಳೂರು: ಇದುವರೆಗೂ 100 ಸಿನಿಮಾಗಳಲ್ಲಿ ನಟಿಸಿ ತಮ್ಮ ಅಭಿನಯ ಚತುರತೆ ತೋರಿರುವ ನಟ ರಮೇಶ್ ಅರವಿಂದ್ ಅವರ 101 ನೇ ಸಿನಿಮಾವನ್ನು ರವೀಂದ್ರನಾಥ್ ನಿರ್ದೇಶಿಸಲಿದ್ದಾರೆ.
ರಮೇಶ್ ಅವರ 100ನೇ ಚಿತ್ರ ಪುಷ್ಪಕವಿಮಾನಕ್ಕೆ ರವೀಂದ್ರನಾಥ್ ನಿರ್ದೇಶನ ಮಾಡಿದ್ದರು. 1986 ರಿಂದ ಇಲ್ಲಿಯವರೆಗೆ ರಮೇಶ್ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿ, ಪ್ರೇಕ್ಷಕರಿಗೆ ಯಾವ ವಿಷಯ ಬೇಸರ ತರಿಸುವುದಿಲ್ಲ ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. 
100ನೇ ಸಿನಿಮಾ ಪುಷ್ಪಕ ವಿಮಾನದಲ್ಲಿ ಅಮೋಘ ನಟನೆ ನಂತರ ಮತ್ತೆ ಅದೇ ಚಿತ್ರ ತಂಡದೊಂದಿಗೆ 101ನೇ ಸಿನಿಮಾ ಗೆ ಸಿದ್ಧರಾಗಿದ್ದಾರೆ.ವಿಖ್ಯಾತ್  ಸ್ಟುಡಿಯೋ ಬ್ಯಾನರ್ ನಲ್ಲಿ ಮುಂದಿನ ಸಿನಿಮಾ ತಯಾರಾಗಲಿದ್ದು, ಅಧಿಕೃತ ಘೋಷಣೆ ಯಾಗಬೇಕಿದೆ.
ವಿಕೆಂಡ್ ವಿತ್ ರಮೇಶ್ ರಿಯಾಲಿಟಿ ಶೋನಲ್ಲಿ ರಮೇಶ್ ಬ್ಯುಸಿಯಾಗಿದ್ದರು. ಈಗ ಕಾರ್ಯಕ್ರಮ ಮುಗಿದಿದ್ದು, ಪಾರುಲ್ ಯಾದವ್ ಅಭಿನಯದ ಬಟರ್ ಫ್ಲೈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗಾಗಿ ಲಂಡನ್ ನಲ್ಲಿ ಶೂಟಿಂಗ್ ನಡೆಯುತ್ತಿದೆ,.ಕ್ವೀನ್ ಚಿತ್ರವನ್ನು ಕನ್ನಡ ಮತ್ತು ತಮಿಳಿನಲ್ಲಿ ರಮೇಶ್ ರಿಮೇಕ್ ಮಾಡುತ್ತಿದ್ದಾರೆ. 
ಇದನ್ನು ಬಿಟ್ಟು ರಮೇಶ್ ಅರವಿಂದ್ ರ ಮುಂದಿನ ಸಿನಿಮಾಗಾಗಿ ಚಿತ್ರಕಥೆ ತಯಾರಾಗುತ್ತಿದೆ, ಬರಹಗಾರರು ನಿರ್ದೇಶಕರ ಜೊತೆ ಈಡೀ ಭಾರತ ಪರ್ಯಟನೆ ಮಾಡುತ್ತಿದ್ದಾರೆ. ಎಲ್ಲವು ಅಂದುಕೊಂಡಂತೆ ನಡೆದರೇ ಆಗಸ್ಟ್ ನಲ್ಲಿ ಸಿನಿಮಾ ಸೆಟ್ಟೇರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com