ಸಿಲಿಕಾನ್ ಸಿಟಿಯಲ್ಲಿ ದಳಪತಿ ಚಿತ್ರೀಕರಣ: ಹಾಡೊಂದಕ್ಕೆ ಹೆಜ್ಜೆ ಹಾಕಿದ ಪ್ರೇಮ್ -ಕೃತಿ ಕರಬಂಧ

ವ್ಲಿ ಸ್ಚಾರ್ ಪ್ರೇಮ್ ಹಾಗೂ ಕೃತಿ ಕರಬಂಧ ನಟನೆಯ ದಳಪತಿ ಸಿನಿಮಾ ಹಾಡೊಂದರ ಶೂಟಿಂಗ್ ಬೆಂಗಳೂರಿನಲ್ಲಿ ...
ಪ್ರೇಮ್ ಮತ್ತು ಕೃತಿ ಕರಬಂಧ
ಪ್ರೇಮ್ ಮತ್ತು ಕೃತಿ ಕರಬಂಧ
Updated on
ಬೆಂಗಳೂರು: ಲವ್ಲಿ ಸ್ಚಾರ್ ಪ್ರೇಮ್ ಹಾಗೂ ಕೃತಿ ಕರಬಂಧ ನಟನೆಯ ದಳಪತಿ ಸಿನಿಮಾ ಹಾಡೊಂದರ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯಿತು. 
ಸಿನಿಮಾದ ಹಾಡೊಂದಕ್ಕೆ ನಗರದ ಹಲವು ರಸ್ತೆಗಳಲ್ಲಿ ಪ್ರೇಮ್- ಕೃತಿಕರಬಂಧ ಸ್ಟೆಪ್ ಹಾಕಿದ್ದಾರೆ.
2014 ರಲ್ಲಿ ದಳಪತಿ ಸಿನಿಮಾ ಘೋಷಣೆಯಾಯಿತು. ಆದರೆ ಹಿಂದಿನ ಕಮಿಟ್ ಮೆಂಟ್ ಗಳ ಕಾರಣ ಶೂಟಿಂಗ್ ಆರಂಭವಾಗಿರಲಿಲ್ಲ, ಪ್ರೇಮ್ ಚೌಚ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಕೃತಿ ಕರಬಂಧ ಬಾಲಿವುಡ್ ನಲ್ಲಿ ಶೂಟಿಂಗ್ ನಲ್ಲಿದ್ದರು, ನಾನು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ  ಝೂಮ್ ಸಿನಿಮಾದಲ್ಲಿ ನಿರತನಾಗಿದ್ದೆ. ಹೀಗಾಗಿ ದಳಪತಿ ವಿಳಂಬವಾಯಿತು ಎಂದು ನಿರ್ದೇಶಕ ಪ್ರಶಾಂತ್ ರಾಜ್ ಹೇಳಿದ್ದಾರೆ.
ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಆಗಸ್ಟ್ ನಲ್ಲಿ ಮೆಗಾ ಆಡಿಯೋ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು, ಸೆಪ್ಟಂಬರ್ ನಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com