ಧನುಷ್ ಅವರ 'ವಿಐಪಿ೨' ಟೀಸರ್ ಬಿಡುಗಡೆ ಮಾಡಿದ ಅಮಿತಾಬ್ ಬಚ್ಚನ್

ನಟ ಧನುಷ್ ಅವರ ತಮಿಳು ಆಕ್ಷನ್ ಚಲನಚಿತ್ರ 'ವಿಐಪಿ೨' ಟೀಸರ್ ಅನ್ನು ಬುಧವಾರ ಬಿಡುಗಡೆ ಮಾಡಿದ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ನಟನಿಗೆ ಶುಭ ಹಾರೈಸಿದ್ದಾರೆ.
'ವಿಐಪಿ೨' ಸಿನೆಮಾದ ಸ್ಟಿಲ್
'ವಿಐಪಿ೨' ಸಿನೆಮಾದ ಸ್ಟಿಲ್
Updated on
ಚೆನ್ನೈ: ನಟ ಧನುಷ್ ಅವರ ತಮಿಳು ಆಕ್ಷನ್ ಚಲನಚಿತ್ರ 'ವಿಐಪಿ೨' ಟೀಸರ್ ಅನ್ನು ಬುಧವಾರ ಬಿಡುಗಡೆ ಮಾಡಿದ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ನಟನಿಗೆ ಶುಭ ಹಾರೈಸಿದ್ದಾರೆ. 
"ನನ್ನ ಗೆಳೆಯ, ನನ್ನ ಸಹನಟ ಮತ್ತು ನನ್ನ ಗೆಳೆಯನ ಅಳಿಯ ಧನುಷ್, ಅವರ ನೂತನ ಸಿನೆಮಾದ ಟೀಸರ್. ಅವರಿಗೆ ಶುಭಾಶಯಗಳು" ಎಂದು ಬಚ್ಚನ್ ಫೇಸ್ಬುಕ್ ನಲ್ಲಿ ಬರೆದಿದ್ದಾರೆ. 
ಸೌಂದರ್ಯ ರಜನಿಕಾಂತ್ ನಿರ್ದೇಶಿಸಿರುವ ಈ ಸಿನೆಮಾದಲ್ಲಿ ಅಮಲಾ ಪಾಲ್ ಮತ್ತು ಸಮುದ್ರಕಿಣಿ ನಟಿಸಿದ್ದಾರೆ. ಕಾಜೋಲ್ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದು, ಎರಡು ದಶಕಗಳ ನಂತರ ತಮಿಳು ಚಿತ್ರರಂಗಕ್ಕೆ ಹಿಂದಿರುಗಿದ್ದಾರೆ. 
ಧನುಷ್ ಅವರೇ ನಿರ್ಮಿಸುತ್ತಿರುವ ಈ ಸಿನೆಮಾಗೆ ಶಾನ್ ರೊಲ್ಡಾನ್ ಸಂಗೀತ ನೀಡಿದ್ದಾರೆ. ಜುಲೈ ನಲ್ಲಿ ಬಿಡುಗಡೆಯಾಗಲಿರುವ ಈ ಸಿನೆಮಾದ ಹಿಂದಿನ ಭಾಗ 'ವೇಳಯಿಲ್ಲ ಪಟ್ಟಾಧಾರಿ' (ವಿಐಪಿ) ೨೦೧೪ ರಲ್ಲಿ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಚಿತ್ರ ಎನ್ನಿಸಿಕೊಂಡಿತ್ತು. 
ಟೀಸರ್ ಇಲ್ಲಿ ವೀಕ್ಷಿಸಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com