ರಿಮೇಕ್ ಸಿನೆಮಾಗಳ ಬಗ್ಗೆ ಹೆಚ್ಚು ಆಸಕ್ತಿ ಇಲ್ಲ ಎಂದಿರುವ ನಟಿ ವಿದ್ಯಾ ಬಾಲನ್, ಅದರಲ್ಲೂ ಕ್ಲಾಸಿಕ್ ಸಿನೆಮಾಗಳ ರಿಮೇಕ್ ನಲ್ಲಿ ನಟಿಸುವುದುದಕ್ಕೆ ಸ್ವಲ್ಪವೂ ಉತ್ಸಾಹವಿಲ್ಲ ಎಂದಿದ್ದಾರೆ.
ನವದೆಹಲಿ: ರಿಮೇಕ್ ಸಿನೆಮಾಗಳ ಬಗ್ಗೆ ಹೆಚ್ಚು ಆಸಕ್ತಿ ಇಲ್ಲ ಎಂದಿರುವ ನಟಿ ವಿದ್ಯಾ ಬಾಲನ್, ಅದರಲ್ಲೂ ಕ್ಲಾಸಿಕ್ ಸಿನೆಮಾಗಳ ರಿಮೇಕ್ ನಲ್ಲಿ ನಟಿಸುವುದುದಕ್ಕೆ ಸ್ವಲ್ಪವೂ ಉತ್ಸಾಹವಿಲ್ಲ ಎಂದಿದ್ದಾರೆ.
"ರಿಮೇಕ್ ಗಳಲ್ಲಿ ಅದರಲ್ಲಿ ಕ್ಲಾಸಿಕ್ ಸಿನೆಮಾಗಳ ರಿಮೇಕ್ ಗಳಲ್ಲಿ ನಟಿಸುವುದಕ್ಕೆ ನನಗೆ ಉತ್ಸಾಹ ಇಲ್ಲ. ಆದರೆ ನಟನಾಗಿ ನಿಮಗೆ ಇರುವ ದುರಾಸೆ ನೀವು ಮಾಡಿಕೊಂಡ ಎಲ್ಲ ನಿಯಮಗಳನ್ನು ಮುರಿಯುವಂತೆ ಮಾಡುತ್ತದೆ" ಎಂದಿದ್ದಾರೆ ವಿದ್ಯಾ.
ಪ್ರಖ್ಯಾತ ಬೆಂಗಾಲಿ ಸಿನೆಮಾ 'ರಾಜ್ ಕಹಾನಿ'ಯ ಹಿಂದಿ ಅವತರಿಣಿಕೆ ಶ್ರೀಜಿತ್ ಮುಖರ್ಜಿ ಅವರ 'ಬೇಗಂ ಜಾನ್' ಸಿನೆಮಾದಲ್ಲಿ ವಿದ್ಯಾ ಬಾಲನ್ ನಟಿಸಿದ್ದಾರೆ. ೧೯೪೭ರ ದೇಶ ವಿಭಜನೆಯ ಸಮಯದಲ್ಲಿ ನಡೆಯುವ ಕಥೆಯಲ್ಲಿ ವೇಶ್ಯಾಗೃಹದ ಒಡತಿಯಾಗಿ ವಿದ್ಯಾ ಬಾಲನ್ ಕಾಣಿಸಿಕೊಂಡಿದ್ದಾರೆ.
ಮಹೇಶ್ ಭಟ್ ಮತ್ತು ಮುಖೇಶ್ ಭಟ್ ಅವರ ವಿಶೇಷ್ ಫಿಲಂಸ್ ಇದನ್ನು ನಿರ್ಮಿಸಿದ್ದು, ಏಪ್ರಿಲ್ ೧೪ ಕ್ಕೆ ಬಿಡುಗಡೆಯಾಗಲಿದೆ.
ಈ ಸಿನೆಮಾ ಬಗ್ಗೆ ಮಾತನಾಡಿರುವ ವಿದ್ಯಾ "ಶ್ರೀಜಿತ್ ಒಂದು ಒರಿಜಿನಲ್ ಸಿನೆಮಾ ಮಾಡುವುದಕ್ಕೆ ನನಗೆ ಕೇಳಿದ್ದರು ಆದರೆ ಆಗ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ನನಗೆ ತಪ್ಪಿಸಿಕೊಳ್ಳಲು ಇಷ್ಟವಿರಲಿಲ್ಲ" ಎಂದಿರುವ ವಿದ್ಯಾ ಮೂಲ ಸಿನೆಮಾವನ್ನು ನಾನು ಅನುಕರಿಸಿಲ್ಲ ಎಂದಿದ್ದಾರೆ.