ಅಂಜನಿಪುತ್ರ ಚಿತ್ರದ ನಿರ್ದೇಶಕ ಹರ್ಷ ಪುನೀತ್ ಅವರೊಟ್ಟಿಗೆ ಕುಣಿಯಲು ಹರಿಪ್ರಿಯರನ್ನು ಆಯ್ಕೆ ಮಾಡಿದ್ದಾರೆ. ಪುನೀತ್ ರಾಜ್‍ಕುಮಾರ್ ಇಂಟ್ರಡಕ್ಷನ್ ಸಾಂಗ್ ನಲ್ಲಿ ಹರಿಪ್ರಿಯ ಹೆಜ್ಜೆ ಹಾಕಲಿದ್ದು ನಾಳೆಯಿಂದ ಹಾಡಿನ ಚಿತ್ರೀಕರಣ ಪ್ರಾರಂಭವಾಗಲಿದೆ. ಅಂಜನಿಪುತ್ರಕ್ಕೆ ಎಂಎನ್ ಕುಮಾರ್ ಹಣ ಹೂಡಿದ್ದಾರೆ. ಇನ್ನು ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದು ಸ್ವಾಮಿ ಅವರ ಛಾಯಾಗ್ರಹಣವಿದೆ.