ನವದೆಹಲಿ: ಫತ್ವಾ ಹೊರಡಿಸುವ ಮೂಲಕ ಜೀವ ಬೆದರಿಕೆ ಹಾಕುವವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಸಿದ್ಧ ಗಾಯಕ ಸೋನು ನಿಗಮ್ ಹೇಳಿದ್ದಾರೆ.
ಕಳೆದ ತಿಂಗಳು ಮುಸ್ಲಿಮರ ಆಜಾದ್ ಸಂಪ್ರದಾಯದ ವಿರುದ್ದ ಟ್ವೀಟ್ ಮಾಡಿ ಸೋನು ನಿಗಮ್ ವಿವಾದಕ್ಕೀಡಾಗಿದ್ದರು.
ನಾನು ದೇವರಲ್ಲಿ ಸಂಪೂರ್ಣ ನಂಬಿಕೆ ಇಟ್ಟಿದ್ದೇನೆ, ಆತ ಸರ್ವಂತರ್ಯಾಮಿ. ಆದರೆ ಈ ಮಾನಸಿಕ ಸ್ಥಿತಿ ನನಗೆ ಇಷ್ಟವಾಗುವುದಿಲ್ಲ, ಯಾರ ವಿರುದ್ಧವಾದರೂ ಫತ್ವಾ ಹೊರಡಿಸುವುದನ್ನು ನಾನು ವಿರೋಧಿಸುತ್ತೇನೆ, ವ್ಯಕ್ತಿಯ ತಲೆ ಬೋಳಿಸಿ ಆತನನ್ನು ಕೊಲ್ಲುವ ಆದೇಶ ಫತ್ವಾದಲ್ಲಿದೆ ಎಂದು ಸೋನು ನಿಗಮ್ ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಖಾಸಗಿ ಚಾನಲ್ ನ ಸಂದರ್ಶನವೊಂದರಲ್ಲಿ ಸೋನು ನಿಗಮ್ ಹೇಳಿದ್ದಾರೆ. ಯಾರೋಬ್ಬರು ಗೂಂಡಾಗಿರಿ ಮಾಡುವುದನ್ನು ನಾನು ಸಹಿಸುವುದಿಲ್ಲ. ಧರ್ಮದ ಹೆಸರಲ್ಲಿ 12 ಜನರ ಗುಂಪು ಕುಟುಂಬವೊಂದಕ್ಕೆ ಬೆದರಿಕೆ ಹಾಕುತ್ತಾರೆ. ಆ ರೀತಿಯ ಘಟನೆಗಳು ನಮ್ಮ ದೇಶದಲ್ಲಿ ನಡೆಯಬಾರದು, ನಾವು ನಾಗರಿಕತೆ ಹೊಂದಿರುವ ಪ್ರಜಾಪ್ರಭುತ್ವ ದೇಶದಲ್ಲಿ ಬದುಕುತ್ತಿದ್ದೇವೆ, ಅಚ್ಛೇದಿನ್ ಬರುತ್ತದೆ ಎಂದು ಸೋನು ನಿಗಮ್ ಅಭಿಪ್ರಾಯ ಪಟ್ಟಿದ್ದಾರೆ.