ನಗ್ನ ಚಿತ್ರಗಳಿಗೆ ನಟಿ ಮಣಿಯರ ಮುಖ; ಪೂಲೀಸ್ ದೂರು ದಾಖಲಿಸಿದ ನಟಿ ಶೃತಿ ಹರಿಹರನ್!

ನಗ್ನಚಿತ್ರಗಳಿಗೆ ನಟಿಯರ ಮುಖ ಅಂಟಿಸಿ ಅಶ್ಲೀಲ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿರುವ ದುಷ್ಕರ್ಮಿಗಳ ವಿರುದ್ಧ ನಟಿ ಶೃತಿಹರಿಹರನ್ ಅವರು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಟಿ ಶೃಕಿ ಹರಿಹರನ್
ನಟಿ ಶೃಕಿ ಹರಿಹರನ್
Updated on: 

ಬೆಂಗಳೂರು: ನಗ್ನಚಿತ್ರಗಳಿಗೆ ನಟಿಯರ ಮುಖ ಅಂಟಿಸಿ ಅಶ್ಲೀಲ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿರುವ ದುಷ್ಕರ್ಮಿಗಳ ವಿರುದ್ಧ ನಟಿ ಶೃತಿಹರಿಹರನ್ ಅವರು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಿನ್ನೆ ಬೆಂಗಳೂರಿನ ಆಯುಕ್ತರ ಕಚೇರಿಗೆ ಆಗಮಿಸಿ ಅಲ್ಲಿ ಸೈಬರ್ ಠಾಣೆಯಲ್ಲಿ ನಟಿ ಶೃತಿಹರಿಹರನ್ ಅವರು ದೂರು ದಾಖಲು ಮಾಡಿದ್ದು, ನಟಿಯರ ಚಿತ್ರಗಳನ್ನು ಅಶ್ಲೀಲ ಚಿತ್ರಗಳಿಗಳಿಗೆ ಅಂಟಿಸಿ ಅವುಗಳನ್ನು ಸಾಮಾಜಿಕ  ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಾರೆ’ ಎಂದು ನಟಿ ಶ್ರುತಿ ಹರಿಹರನ್‌ ಅವರು ತಮ್ಮ ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಫೇಸ್‌ಬುಕ್‌ ಹಾಗೂ ಟ್ವಿಟರ್‌ನ ಕೆಲ ಖಾತೆಗಳಲ್ಲಿ ಕನ್ನಡ ನಟಿಯರ ಮುಖವಿರುವ ಅಶ್ಲೀಲ ಚಿತ್ರಗಳನ್ನು ಅಪ್ಲೋಡ್ ಮಾಡಲಾಗಿದ್ದು,  ಈ ಫೋಟೋಗಳ ಪೈಕಿ ನನ್ನ ಚಿತ್ರಗಳೂ ಇವೆ. ಇದರಿಂದ ಮನಸ್ಸಿಗೆ ತಂಬಾ ನೋವಾಗಿದ್ದು,  ಅಂಥ ಕೃತ್ಯ ಎಸಗುತ್ತಿರುವ ದುಷ್ಕರ್ಮಿಗಳು ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ. "ಮಹಿಳೆಗೆ ಗೌರವದ ಸ್ಥಾನವಿದೆ. ಅವರ ನಗ್ನ ಚಿತ್ರಗಳನ್ನು ಈ ರೀತಿ ಪ್ರಕಟಿಸುವುದು   ಸರಿಯಲ್ಲ. ನಟಿಯರನ್ನು ಕೀಳಾಗಿ ನೋಡುವ ಮನಸ್ಥಿತಿಯುಳ್ಳ ಜನರೇ ಇಂಥ ಕೃತ್ಯ ಎಸಗುತ್ತಿದ್ದಾರೆ’ ಎಂದು ನಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ನಟಿಯಿಂದ ದೂರು ಪಡೆದ ಸೈಬರ್ ಠಾಣಾಧಿಕಾರಿಯೊಬ್ಬರು, "ದೂರು ಪಡೆದು ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ. ದುಷ್ಕರ್ಮಿಗಳು ನಕಲಿ ಖಾತೆ ತೆರೆದು ಇಂಥ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com