ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ ವಿಲನ್ ಸಿನಿಮಾದ ಮೂಲಕ ತಮಿಳಿನ ಆ್ಯಮಿ ಜಾಕ್ಸನ್ ಕನ್ನಡಕ್ಕೆ ಎಂಟ್ರಿ ಕೊಡ್ತಿದ್ದಾರೆ.
ಈ ಮಂಚೆ ಸಹಿ ಮಾಡಿರುವ ಸಿನಿಮಾಗಳ ಶೂಟಿಂಗ್ ಡೇಟ್ಸ್ ಹೊಂದಾಣಿಕೆ ಮಾಡಿಕೊಂಡು ಶೀಘ್ರದಲ್ಲೇ ಪ್ರೇಮ್ ತಂಡಕ್ಕೆ ಆ್ಯಮಿ ಸೇರಲಿದ್ದಾಳೆ.
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಜೊತೆಯಾಗಿ ನಟಿಸುತ್ತಿರುವ ವಿಲನ್ ಚಿತ್ರಕ್ಕೆ ನಾಯಕಿ ಆಯ್ಕೆಯಾಗಿದ್ದು, ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಬೇಕಿದೆ.
ಪ್ರೇಮ್ ತಂಡ ಮತ್ತೊಬ್ಬ ನಾಯಕಿಗಾಗಿ ಶೋಧ ನಡೆಸಿದ್ದು, ಕಾಜಲ್ ಅಗರ್ ವಾಲ್, ಅಮಿರಾ ದಸ್ತೂರ್, ಶೃತಿ ಹಾಸನ್ ಇಲ್ಲವೇ ಅದಿತಿ ರಾವ್ ಹೈದರಿ ಹೆಸರುಗಳು ಕೇಳಿ ಬರುತ್ತಿವೆ.
ಮೇ ತಿಂಗಳ ಅಂತ್ಯದಲ್ಲಿ ಲಂಡನ್ ನಲ್ಲಿ ನಡೆಯುವ ಚಿತ್ರೀಕರಣದಲ್ಲಿ ಆ್ಯಮಿ ಜಾಕ್ಸನ್ ಭಾಗವಹಿಸಲಿದ್ದಾಳೆ. ಚಿತ್ರಕಥೆ ಆಕೆಗೆ ಇಷ್ಟವಾಗಿದ್ದು, ಪ್ರೇಮ್ ನಿರ್ದೇಶನದಲ್ಲಿ ನಟಿಸಲು ಕಾತುರಳಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ.