ಬಾಲಿವುಡ್ ಹಿರಿಯ ನಟಿ ರೀಮಾ ಲಾಗೂ ವಿಧಿವಶ

ಖ್ಯಾತ ಹಿಂದಿ ಮತ್ತು ಮರಾಠಿ ಹಿರಿಯ ನಟಿ ರೀಮಾ ಲಾಗೂ ಅವರು ಗುರುವಾರ ಬೆಳಗ್ಗೆ ಹೃದಯಘಾತದಿಂದ ವಿಧಿವಶರಾಗಿದ್ದಾರೆ. ...
ರೀಮಾ ಲಾಗೂ
ರೀಮಾ ಲಾಗೂ
Updated on: 
ಮುಂಬೈ : ಖ್ಯಾತ ಹಿಂದಿ ಮತ್ತು ಮರಾಠಿ ಹಿರಿಯ ನಟಿ ರೀಮಾ ಲಾಗೂ ಅವರು ಗುರುವಾರ ಬೆಳಗ್ಗೆ ಹೃದಯಘಾತದಿಂದ ವಿಧಿವಶರಾಗಿದ್ದಾರೆ. 
ಅನಾರೋಗ್ಯದಿಂದ ಮುಂಬೈನ ಕೋಕಿಲಾ ಬೇನ್ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದ 59 ವರ್ಷದ ರೀಮಾ ಲಾಗೂ ಇಂದು ಬೆಳಗ್ಗೆ ನಿಧನರಾಗಿದ್ದಾರೆ. 
1958ರಲ್ಲಿ ಜನಿಸಿದ್ದ ರೀಮಾ 1970 ರ ದಶಕದಲ್ಲಿ ಮರಾಠಿ ರಂಗಭೂಮಿ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿ ಹಲವು ಹಿಂದಿ ಚಿತ್ರಗಳಲ್ಲಿ ಪೋಷಕ ಸೇರಿ ಇತರೆ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.
"ಮೇನೆ ಪ್ಯಾರ್ ಕೀಯಾ" ಚಿತ್ರದಲ್ಲಿ ಸಲ್ಮಾನ್ ಖಾನ್ ತಾಯಿಯ ಪಾತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದ ರೀಮಾ ಹಲವು ಜನಪ್ರಿಯ ಟಿವಿ ಶೋಗಳಲ್ಲೂ ಭಾಗವಹಿಸಿದ್ದರು. ಆಶಿಕಿ, ಹಮ್ ಅಪ್ ಕೆ ಹೈಕೌನ್, ವಾಸ್ತವ್, ಕುಚ್ ಕುಚ್ ಹೋತಾ ಹೈ, ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದರು. ಮಧ್ಯಾಹ್ನ 2 ಗಂಟೆಗೆ ಅಂತ್ಯ ಸಂಸ್ಕಾರ ನಡೆಯಲಿದ್ದು, ರೀಮಾ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com