ಚೈನಾದಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿರುವ ರಾಜಮೌಳಿ ನಿರ್ದೇಶನದ 'ಬಾಹುಬಲಿ ೨'

ಜಾಗತಿಕ ಬಾಕ್ಸ್ ಆಫೀಸ್ ಅನ್ನು ಗೆದ್ದ ಮೇಲೆ ಈಗ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ೨: ಅಂತ್ಯ' ಚೈನಾದಾದ್ಯಂತ ಬಿಡುಗಡೆ ಕಾಣಲು ಸಿದ್ಧವಾಗಿದೆ.
ಬಾಹುಬಲಿ೨ ಸಿನೆಮಾದ ಪೋಸ್ಟರ್
ಬಾಹುಬಲಿ೨ ಸಿನೆಮಾದ ಪೋಸ್ಟರ್
ನವದೆಹಲಿ: ಜಾಗತಿಕ ಬಾಕ್ಸ್ ಆಫೀಸ್ ಅನ್ನು ಗೆದ್ದ ಮೇಲೆ ಈಗ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ೨: ಅಂತ್ಯ' ಚೈನಾದಾದ್ಯಂತ ಬಿಡುಗಡೆ ಕಾಣಲು ಸಿದ್ಧವಾಗಿದೆ. 
ಬಾಲಿವುಡ್ ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ್ ಈ ಬಗ್ಗೆ ಟ್ವೀಟ್ ಮಾಡಿದ್ದು "ಬಾಹುಬಲಿ ೨ ಚೈನಾ ಬಿಡುಗಡೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು... ಅಪ್ಡೇಟ್: ಚೈನಾದಲ್ಲಿ ಬಿಡುಗಡೆ ಮಾಡುವ ಯೋಜನೆಯ ಮಾತುಕತೆಯನ್ನು ಬಾಹುಬಲಿ ೨ ನಿರ್ಮಾಪಕರು ಪ್ರಾರಂಭಿಸಿದ್ದಾರೆ" ಎಂದಿದ್ದಾರೆ. 
ಬಿಡುಗಡೆಗೆ ಯಾವುದೇ ದಿನಾಂಕರವನ್ನು ಇನ್ನು ನಿರ್ಧರಿಸಿಲ್ಲ ಎಂದು ಕೂಡ ಅವರು ತಿಳಿಸಿದ್ದು, ಆದಷ್ಟು ಬೇಗೆ ಬಿಡುಗಡೆ ಮಾಡಲು ನಿರ್ಮಾಪಕರು ಎದುರು ನೋಡುತ್ತಿದ್ದಾರೆ ಎಂದಷ್ಟೇ ಹೇಳಿದ್ದಾರೆ. 
ಇತ್ತೀಚೆಗಷ್ಟೇ ಚೈನಾದಲ್ಲಿ ಬಿಡುಗಡೆಯಾದ ಬಾಲಿವುಡ್ ಸಿನೆಮಾ 'ದಂಗಾಲ್' ಬಾಕ್ಸ್ ಆಫಿಸ್ ನಲ್ಲಿ ಅಭೂತಪೂರ್ವ ಗಳಿಕೆ ಕಂಡಿತ್ತು. ೯೦೦೦ ತೆರೆಗಳಲ್ಲಿ ಬಿಡುಗಡೆಯಾಗಿದ್ದ 'ದಂಗಾಲ್' ಚೈನಾದಲ್ಲಿಯೇ 778  ಕೋಟಿ ರೂ ಗಳಿಸಿತ್ತು. ಅದರ ಜಾಗತಿಕ ಗಳಿಕೆ ೧೪೭೧ ಕೋಟಿ ರೂ. 
ಚೈನಾದಲ್ಲಿ ಹೊರತುಪಡಿಸಿ ವಿಶ್ವದಾದ್ಯಂತ ೧೫೦೦ ಕೋಟಿಗಿಂತಲೂ ಹೆಚ್ಚು ಗಳಿಕೆ ಕಂಡ ಮೊದಲ ಭಾರತೀಯ ಸಿನೆಮಾ ಬಾಹುಬಲಿ೨ ಎಂಬ ಹೆಗ್ಗಳಿಕೆ ಗಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com