ಬೇವಾಚ್‌ಗೆ ಕಳಪೆ ವಿಮರ್ಶೆ ನಟ ಡ್ವೈನ್ ಜಾನ್ಸನ್ ಆಕ್ರೋಶ

ಹಾಲಿವುಡ್ ನ ಬಹುನಿರೀಕ್ಷಿತ ಚಿತ್ರ ಬೇವಾಚ್ ಬಿಡುಗಡೆಯಾಗಿದ್ದು ಚಿತ್ರಕ್ಕೆ ಕಳಪೆ ವಿಮರ್ಶೆ ನೀಡಿರುವುದಕ್ಕೆ ನಟ ಡ್ವೈನ್ ಜಾನ್ಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ...
ಡ್ವೈನ್ ಜಾನ್ಸನ್-ಪ್ರಿಯಾಂಕಾ ಚೋಪ್ರಾ
ಡ್ವೈನ್ ಜಾನ್ಸನ್-ಪ್ರಿಯಾಂಕಾ ಚೋಪ್ರಾ
Updated on
ನವದೆಹಲಿ: ಹಾಲಿವುಡ್ ನ ಬಹುನಿರೀಕ್ಷಿತ  ಚಿತ್ರ ಬೇವಾಚ್ ಬಿಡುಗಡೆಯಾಗಿದ್ದು ಚಿತ್ರಕ್ಕೆ ಕಳಪೆ ವಿಮರ್ಶೆ ನೀಡಿರುವುದಕ್ಕೆ ನಟ ಡ್ವೈನ್ ಜಾನ್ಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ದಿ ರಾಕ್ ಎಂದೇ ಪ್ರಖ್ಯಾತರಾಗಿರುವ 45 ವರ್ಷದ ಡ್ವೈನ್ ಜಾನ್ಸನ್ ಧನಾತ್ಮಕ ಮನೋಭಾವವನ್ನು ಉಳ್ಳವರಾಗಿದ್ದರು. ಆದರೆ ಇದೀಗ ಬೇವಾಚ್ ವಿಮರ್ಶೆ ವಿರುದ್ಧ ಟ್ವೀಟರ್ ನಲ್ಲಿ ಕಿಡಿಕಾರಿದ್ದಾರೆ. 
ರಾಕ್ ಟ್ವೀಟರ್ ನಲ್ಲಿ ಹೌದು ಸಕಾರಾತ್ಮಕ ಸುಧಾರಣೆಗಳು. ಅಭಿಮಾನಿಗಳು ಚಿತ್ರವನ್ನು ಇಷ್ಟಪಟ್ಟಿದ್ದಾರೆ. ವಿಮರ್ಶಕರು ಇದನ್ನು ದ್ವೇಷಿಸುತ್ತಾರೆ. ಎಂತಹ ದ್ವಿಮುಖ ಪ್ರಕ್ರಿಯೆ. ಜನರು ಕೇವಲ ನಗುವುದನ್ನು ಬಯಸುತ್ತಾರೆ ಮತ್ತು ಆನಂದಿಸುತ್ತಾರೆ ಎಂದು ಬರೆದಿದ್ದಾರೆ. 
ಬೇವಾಚ್ ಚಿತ್ರದ ಮೂಲಕ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರ ಹಾಲಿವುಡ್ ಸಿನೆಮಾಗೆ ಪಾದಾರ್ಪಣೆ ಮಾಡಿದ್ದು ಚಿತ್ರವನ್ನು ಸೇಥ್ ಗಾರ್ಡನ್ ನಿರ್ದೇಶಿಸಿದ್ದಾರೆ. ಚಿತ್ರ ಜೂನ್ 6ರಂದು ಭಾರತದಾದ್ಯಂತ ತೆರೆ ಕಾಣಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com