ಡಾ. ರಾಜ್ ಸಮಾಧಿ ಪಕ್ಕದಲ್ಲೆ ಪಾರ್ವತಮ್ಮ ರಾಜ್ ಕುಮಾರ್ ಸಮಾಧಿ

ಮೇ.31 ರಂದು ಬೆಳಿಗ್ಗೆ ನಿಧನರಾದ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರ ಅಂತ್ಯ ಸಂಸ್ಕಾರ ಕಂಠೀರವ ಸ್ಟುಡಿಯೋದಲ್ಲಿ ಸಂಜೆ 6:00 ವೇಳೆಗೆ ನಡೆಯಿತು.
ಪಾರ್ವತಮ್ಮ ರಾಜ್ ಕುಮಾರ್
ಪಾರ್ವತಮ್ಮ ರಾಜ್ ಕುಮಾರ್
ಬೆಂಗಳೂರು: ಮೇ.31 ರಂದು ಬೆಳಿಗ್ಗೆ ನಿಧನರಾದ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರ ಅಂತ್ಯ ಸಂಸ್ಕಾರ ಕಂಠೀರವ ಸ್ಟುಡಿಯೋದಲ್ಲಿ ಸಂಜೆ 6:00 ವೇಳೆಗೆ ನಡೆಯಿತು.
ರಾಜ್ ಕುಮಾರ್ ಸಮಾಧಿ ಪಕ್ಕವೇ ಪಾರ್ವತಮ್ಮನವರ ಅಂತ್ಯಸಂಸ್ಕಾರ ನಡೆಸಲಾಗಿದ್ದು, ಗೋವಿಂದ ನಾಮಸ್ಮರಣೆಯೊಂದಿಗೆ ದಾಸಯ್ಯನ ಪದ್ಧತಿಯಂತೆ ಪುನೀತ್ ರಾಜ್ ಕುಮಾರ್  ಅಂತ್ಯ ಸಂಸ್ಕಾರ ನಡೆಸಿದರು. 
ಸರ್ಕಾರಿ ಗೌರವಗಳೊಂದಿಗೆ ಪಾರ್ವತಮ್ಮನವರ ಅಂತ್ಯಕ್ರಿಯೆ ನಡೆಸಲಾಗಿದ್ದು, ಗೌರವಾರ್ಥವಾಗಿ 3 ಸುತ್ತು ಕುಶಾಲ ತೋಪು ಹಾರಿಸಲಾಯಿತು. ಅಂತ್ಯಕ್ರಿಯೆ ವೇಳೆ ಸಚಿವ ಕೆಜೆ ಜಾರ್ಜ್, ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com