ಮುಂಬೈ: ಲೈಂಗಿಕ ಕಿರುಕುಳ ನೀಡುವವರ ಹೆಸರು ಬಹಿರಂಗಪಡಿಸಿ ಅವಮಾನಿಸಬೇಕು ಎಂದು ನಟಿ ವಿದ್ಯಾಬಾಲನ್ ಹೇಳಿದ್ದಾರೆ.
ಲೈಂಗಿಕ ಕಿರುಕುಳ ಅನುಭವಿಸಿದವರಿಗಷ್ಟೇ ಆ ನೋವು, ಕಿರಿಕಿರಿಯ ಪರಿಸ್ಥಿತಿ ಗೊತ್ತಿರಲು ಸಾಧ್ಯ. ಯಾರಾದರೂ ಮುಟ್ಟಿದರೆ ನನಗೆ ಕೆಲವೊಮ್ಮೆ ಸಿಟ್ಟು ಬರುತ್ತದೆ. ಲೈಂಗಿಕ ಕಿರುಕುಳದಲ್ಲಿಯೂ ಹಲವು ರೀತಿಗಳಿವೆ ಎಂದು ವಿದ್ಯಾಬಾಲನ್ ಹೇಳಿದ್ದಾರೆ.
ಲೈಂಗಿಕ ಕಿರುಕುಳದ ಬಗ್ಗೆ ಜನ ಮಾತನಾಡಲು ಪ್ರಾರಂಭಿಸಿರುವುದು ಸಂತಸದ ವಿಷಯ, ಮಹಿಳೆಯರೂ ಈ ಬಗ್ಗೆ ಧ್ವನಿ ಎತ್ತುತ್ತಿದ್ದು ಲೈಂಗಿಕ ಕಿರುಕುಳ ನೀಡುವವರ ಹೆಸರು ಬಹಿರಂಗಪಡಿಸಿ ಅವಮಾನಿಸಬೇಕು ಎಂದು ವಿದ್ಯಾಬಾಲನ್ ತಮ್ಮ ಚಿತ್ರದ ಪ್ರಮೋಷನ್ ವೇಳೆ ಅಭಿಪ್ರಾಯಪಟ್ಟಿದ್ದಾರೆ.